HEALTH TIPS

ಅಲೋವೆರಾ ಸೌಂದರ್ಯ ಸ್ನೇಹಿ ಮಾತ್ರವಲ್ಲ, ಆರೋಗ್ಯಕ್ಕೂ ಬಹಳ ಒಳ್ಳೆಯದು

           ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಅಲೋವೆರಾ ಅಥವಾ ಲೋಳೆರಸವು ಸೌಂದರ್ಯ ಸ್ನೇಹಿ ಎಂಬುದು ಸಹಜವಾಗಿ ಎಲ್ಲರಿಗೂ ತಿಳಿದಿದೆ. ಆದರೆ, ಇದು ಆರೋಗ್ಯ ವೃದ್ಧಿಸುವುದು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.

           ಹೌದು, ಅಲೋವೆರಾದಲ್ಲಿರುವ ತಂಪಾಗಿಸುವ ಗುಣಲಕ್ಷಣಗಳು ಚರ್ಮದ ಸಮಸ್ಯೆಗಳು, ದೋಶಗಳಲ್ಲಿನ ಅಸಮತೋಲನ, ಯಕೃತ್ತು ಮತ್ತು ಕರುಳಿನಲ್ಲಿನ ಅಸ್ವಸ್ಥತೆಗಳಂತಹ ಕೆಲವು ಸಾಮಾನ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಸಾಮಾನ್ಯ ಘಟಕಾಂಶವಾಗಿದೆ. ಇದರ ಜೊತೆಗೆ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ.


            ಇಂತಹ ಅಲೋವೆರಾವನ್ನು ನಿಮ್ಮ ದಿನಚರಿಯ ಭಾಗವನ್ನಾಗಿ ಮಾಡಿಕೊಳ್ಳಲು ಬಯಸಿದರೆ, ಅಲೋವೆರಾ ಜ್ಯೂಸ್ ಪ್ರತಿದಿನ ಸೇವಿಸುವ ಮೂಲಕ ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ಅಲೋವೆರಾ ಜ್ಯೂಸ್ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರೂ, ಕೆಲವು ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ತಯಾರಿಸಬಹುದು. 

                    ಅಲೋವೆರಾ ಜ್ಯೂಸ್ ಮಾಡುವುದು ಹೇಗೆ?:

            ಬೇಕಾಗಿರುವ ಪದಾರ್ಥಗಳು: ಅಲೋವೆರಾ ಗಿಡ ನೀರು ಜೇನುತುಪ್ಪ ನಿಂಬೆ ರಸ

          ತಯಾರಿಸುವ ವಿಧಾನ: ಒಂದು ಚಮಚವನ್ನು ತೆಗೆದುಕೊಂಡು ತಾಜಾ ಅಲೋವೆರಾ ಜೆಲ್ ತೆಗೆದು, ಅದನ್ನು ಒಮ್ಮೆ ಹರಿಯುವ ನೀರಿನ ಅಡಿಯಲ್ಲಿ ಹಿಡಿಯಿರಿ. ಇದು ಅಲೋವೆರಾ ಗಿಡದ ಕಹಿಯನ್ನು ದೂರ ಮಾಡುತ್ತದೆ. ನಂತರ ಗ್ರೈಂಡರ್‌ಗೆ ಅಲೋವೆರಾ ಜೆಲ್ ಮತ್ತು ನೀರನ್ನು ಸೇರಿಸಿ, ಮಿಶ್ರಣ ಮಾಡಿ. ಅದನ್ನು ಒಂದು ಲೋಟಕ್ಕೆ ಹಾಕಿ, ಅದಕ್ಕೆ ರುಚಿಗೆ ತಕ್ಕಂತೆ ಜೇನುತುಪ್ಪ ಸೇರಿಸಿ. ಸ್ವಲ್ಪ ನಿಂಬೆ ರಸ ಸೇರಿಸುವುದರಿಂದ, ಅಲೋವೆರಾ ರಸದ ಪರಿಮಳವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ಅಲೋವೆರಾ ಜ್ಯೂಸ್ ಅನ್ನು ಹಾಗೆಯೇ ಸೇವಿಸಬಹುದು ಅಥವಾ ಅದನ್ನುಸಾಮಾನ್ಯ ಸ್ಮೂಥಿಗಳೊಂದಿಗೆ ಬೆರೆಸಬಹುದು.
            ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು: ರೋಗ ನಿರೋಧಕ ಶಕ್ತಿ ವೃದ್ಧಿ: ಅಲೋವೆರಾ ಜ್ಯೂಸ್ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದ್ದು, ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ, ಜೊತೆಗೆ ಉರಿಯೂತದ ವಿರುದ್ಧ ಹೋರಾಡುತ್ತದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಕುಡಿಯುವುದರಿಂದ ರಕ್ತವನ್ನು ಶುದ್ಧೀಕರಿಸಲು ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡುತ್ತದೆ. ಅಷ್ಟೆ ಅಲ್ಲ, ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

              ಮಲಬದ್ಧತೆ ನಿವಾರಣೆ: ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಕರುಳಿನ ಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲೋವೆರಾ ರಸವು ಕರುಳಿನಲ್ಲಿ ನೀರಿನ ಅಂಶವನ್ನು ಹೆಚ್ಚಿಸಸುವ ಮೂಲಕ ಮಲಬದ್ಧತೆಯನ್ನು ತಡೆಯುತ್ತದೆ.
            ದೇಹಕ್ಕೆ ಶಕ್ತಿ ನೀಡುವುದು: ಅಲೋವೆರಾವು ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು, ಸೋಡಿಯಂ ಮುಂತಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಆದ್ದರಿಂದ ಅಲೋವೆರಾ ಜ್ಯೂಸ್ ಕುಡಿಯುವುದರಿಂದ ಈ ಎಲ್ಲಾ ಪೋಷಕಾಂಶಗಳು ನಿಮ್ಮ ದೇಹವನ್ನು ಸೇರುವ ಮೂಲಕ ದೇಹಕ್ಕೆ ಶಕ್ತಿ ನೀಡುತ್ತದೆ.

             ತ್ವಚೆಗೆ ಸಹಕಾರಿ: ಅಲೋವೆರಾ ಜ್ಯೂಸ್‌ನಲ್ಲಿ ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಿಮ್ಮ ಚರ್ಮಕ್ಕೆ ಉತ್ತಮವಾಗಿದೆ. ಅಲೋವೆರಾ ಜ್ಯೂಸ್ ತೇವಾಂಶವನ್ನು ನೀಡುತ್ತದೆ, ಜೊತೆಗೆ ನಿಮ್ಮ ಚರ್ಮಕ್ಕೆ ಒಳಗಿನಿಂದ ಸುಂದರವಾದ ಹೊಳಪನ್ನು ನೀಡುತ್ತದೆ. ಇದನ್ನು ನಿಯಮಿತವಾಗಿ ಕುಡಿಯುವುದರಿಂದ ಮೊಡವೆಗಳು ಮತ್ತು ಬಿರುಕುಗಳನ್ನು ಕಡಿಮೆ ಮಾಡುವುದು.


           
Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries