ನವದೆಹಲಿ: 'ಧಾರ್ಮಿಕ ನಂಬಿಕೆಗಳು ಮತ್ತು ರಾಜಕೀಯ ಒಲವು ಜನರನ್ನು ಒಂದುಗೂಡಿಸುವ ಬದಲು ವಿಭಜಿಸುತ್ತಿರುವುದು ದುಃಖಕರ' ಎಂದು ಮಲಯಾಳ ಲೇಖಕ ವಿ.ಜೆ.ಜೇಮ್ಸ್ ಅಭಿಪ್ರಾಯಪಟ್ಟಿದ್ದಾರೆ.
0
samarasasudhi
ನವೆಂಬರ್ 25, 2021
ನವದೆಹಲಿ: 'ಧಾರ್ಮಿಕ ನಂಬಿಕೆಗಳು ಮತ್ತು ರಾಜಕೀಯ ಒಲವು ಜನರನ್ನು ಒಂದುಗೂಡಿಸುವ ಬದಲು ವಿಭಜಿಸುತ್ತಿರುವುದು ದುಃಖಕರ' ಎಂದು ಮಲಯಾಳ ಲೇಖಕ ವಿ.ಜೆ.ಜೇಮ್ಸ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಹೊಸ ಪುಸ್ತಕ 'ಆಯಂಟಿ ಕ್ಲಾಕ್'ನಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
'ಯಾವುದೇ ಧರ್ಮದಲ್ಲಿ ನಿಜವಾದ ನಂಬಿಕೆಯುಳ್ಳ ವ್ಯಕ್ತಿ ಇತರರನ್ನು ಭ್ರಾತೃತ್ವ ಭಾವನೆಯಿಂದ ನೋಡುತ್ತಾನೆ ಎಂಬುದು ನನ್ನ ನಂಬಿಕೆ' ಎಂದು ಹೇಳಿದ್ದಾರೆ.
'ಯಾವುದೇ ಧಾರ್ಮಿಕ ಅಥವಾ ರಾಜಕೀಯ ದೃಷ್ಟಿಕೋನದ ಮಿತಿಯನ್ನು ಮೀರಿದ ದೃಷ್ಟಿಕೋನ ಹೊಂದುವಂತೆ ನನ್ನ ಕೃತಿ ಆಯಂಟಿ ಕ್ಲಾಕ್ ಓದುಗರಿಗೆ ಆಹ್ವಾನ ನೀಡುತ್ತದೆ' ಎಂದೂ ಅವರು ವಿವರಿಸಿದ್ದಾರೆ.
288 ಪುಟಗಳ, ಮಲಯಾಳ ಭಾಷೆಯಲ್ಲಿರುವ ಈ ಪುಸ್ತಕವನ್ನು ಮಿನಿಸ್ಥಿ ಎಸ್. ಅವರು ಇಂಗ್ಲೀಷ್‌ಗೆ ಅನುವಾದಿಸಿದ್ದಾರೆ.