HEALTH TIPS

ZyCoV-D ಲಸಿಕೆ ಬಿಡುಗಡೆ; ಸೂಜಿ ಇಲ್ಲದೇ ಇಂಜೆಕ್ಷನ್ ಹೇಗೆ? ಇಲ್ಲಿದೆ ಎಲ್ಲಾ ಡೀಟೇಲ್ಸ್

              ನವದೆಹಲಿ: ಮಕ್ಕಳಿಗೆ ನೀಡಬಹುದು ಎನ್ನಲಾದ ZyCoV-D ಲಸಿಕೆಗಾಗಿ ಪೋಷಕರ ಕಾಯುವಿಕೆ ಇನ್ನು ಹೆಚ್ಚು ಕಾಲ ಇರದು. ಕೋವಿಡ್ ವಿರುದ್ಧ ರಕ್ಷಣೆಗೆ ವಿಶ್ವದ ಮೊದಲ ಡಿಎನ್​ಎ ಲಸಿಕೆ (DNA Plasmid Vaccine) ಎನಿಸಿರುವ ZyCoV-D ಅನ್ನು ಬಿಡುಗಡೆ ಮಾಡಲಾಗಿದೆ. ಹಿಮಾಚಲಪ್ರದೇಶದ ಕಸೋಲಿಯಲ್ಲಿರುವ ಸೆಂಟ್ರಲ್ ಡ್ರಗ್ ಲ್ಯಾಬೊರೇಟರಿಯಲ್ಲಿ (Central Drug Laboratory) ಈ ಲಸಿಕೆಯನ್ನ ಪರೀಕ್ಷಿಸಿ 2,37,530 ಡೋಸ್​ಗಳಿರುವ ಏಳು ಬ್ಯಾಚ್ ಲಸಿಕೆಯನ್ನು ಬಳಕೆಗಾಗಿ ಬಿಡುಗಡೆ ಮಾಡಲಾಗಿದೆ. ಝೈಕೋವಿ-ಡಿ ಅನ್ನೂ ಸೇರಿ ಒಟ್ಟು ಆರು ಕೋವಿಡ್ ಲಸಿಕೆಗಳ ಒಂದು ಸಾವಿರಕ್ಕೂ ಹೆಚ್ಚು ಬ್ಯಾಚ್​ಗಳನ್ನ ಸಿಡಿಎಲ್ ಬಿಡುಗಡೆ ಮಾಡಿದೆ. ಈ ವರ್ಷ ಸಿಡಿಎಲ್​ನಿಂದ ಅನುಮೋದನೆ ಆಗಿ ಬಿಡುಗಡೆ ಆಗಿರುವ ಲಸಿಕೆ 15 ಕೋಟಿಗೂ ಹೆಚ್ಚು.

                 ZyCoV-D ಲಸಿಕೆಯನ್ನ ಭಾರತದ ಝೈಡಸ್ ಕೆಡಿಲಾ ಹೆಲ್ತ್​ಕೇರ್ ಸಂಸ್ಥೆ ತಯಾರಿಸಿದೆ. ಇದು ಡಿಎನ್​ಎ ಪ್ಲಾಸ್ಮಿಡ್ ವಿಧಾನದಲ್ಲಿ ಮನುಷ್ಯರ ಮೇಲೆ ಪ್ರಯೋಗಿಸಲು ತಯಾರಿಸಲಾದ ವಿಶ್ವದ ಮೊದಲ ಲಸಿಕೆ ಎನಿಸಿದೆ. ಈ ವ್ಯಾಕ್ಸಿನ್ ಅನ್ನು 12 ವರ್ಷ ಹಾಗೂ ಮೇಲ್ಪಟ್ಟ ವಯೋಮಾನದವರೆಲ್ಲರಿಗೂ ನೀಡಬಹುದಾಗಿದೆ.
             ಸೂಜಿರಹಿತ ವ್ಯಾಕ್ಸಿನ್:

                  ಕೋವಿಶೀಲ್ಡ್, ಕೋವ್ಯಾಕ್ಸಿನ್ ಇತ್ಯಾದಿ ಲಸಿಕೆಗಳನ್ನ ಸೂಜಿಯ ಮೂಲಕ ತೋಳಿಗೆ ಕೊಡಲಾಗುತ್ತದೆ. ಆದರೆ, ಝೈಕೋವಿ-ಡಿ ಲಸಿಕೆ ಸೂಜಿರಹಿತ (Needle-Free Vaccine) ವಿಧಾನದಲ್ಲಿ ನೀಡಬಹುದಾದ ಲಸಿಕೆ ಆಗಿದೆ. ಪೋಲಿಯೋ ಲಸಿಕೆಯಂತೆ ಬಾಯಿಯ ಮೂಲಕವೂ ಇದನ್ನ ಕೊಡಲಾಗುವುದಿಲ್ಲ. ಈ ಲಸಿಕೆ ನೀಡಲೆಂದೇ ಜೆಟ್ ಅಪ್ಲಿಕೇಟರ್ ಎಂಬ ಉಪಕರಣ ಇದ್ದು, ಅದರ ಮೂಲಕ ವ್ಯಾಕ್ಸಿನ್ ಅನ್ನ ದೇಹಕ್ಕೆ ಸೇರಿಸಲಾಗುತ್ತದೆ. ನೋವಾಗದ ರೀತಿಯಲ್ಲಿ ಚರ್ಮವನ್ನು ಭೇದಿಸಿಕೊಂಡು ಲಸಿಕೆಯನ್ನ ಒಳಗೆ ಸೇರಿಸುತ್ತದೆ.

            ಸಿರಿಂಜ್​ನಂತೆ ಈ ಜೆಟ್ ಅಪ್ಲಿಕೇಟರ್ ಯೂಸ್ ಅಂಡ್ ಥ್ರೋ ಆಗಿದ್ದು, ಒಮ್ಮೆ ಬಳಸಿದ ಬಳಿಕ ಮತ್ತೆ ಮರುಬಳಕೆ ಮಾಡಲಾಗುವುದಿಲ್ಲ
             ಮೂರು ಡೋಸ್ ಲಸಿಕೆ:

            ಝೈಕೋವಿ-ಡಿ ಲಸಿಕೆ ಪೂರ್ಣಪ್ರಮಾಣದಲ್ಲಿ ಆಗಬೇಕಾದರೆ ಮೂರು ಡೋಸ್ ಹಾಕಿಸಿಕೊಳ್ಳಬೇಕು. ಮೊದಲ ಡೋಸ್ ಹಾಕಿಸಿಕೊಂಡ ಬಳಿಕ ಇನ್ನೆರಡು ಡೋಸ್​ಗಳನ್ನ ತಲಾ 28 ದಿನಗಳ ಅಂತರದಲ್ಲಿ ಹಾಕಿಸಿಕೊಳ್ಳಬೇಕು.

          ಒಂದು ಡೋಸ್ ಲಸಿಕೆಯನ್ನ ಎರಡು ಶಾಟ್​ಗಳಲ್ಲಿ ಹಾಕಬೇಕು. ಅಂದರೆ, ಬಲಗೈ ಮತ್ತು ಎಡಗೈ ಎರಡಕ್ಕೂ ವ್ಯಾಕ್ಸಿನ್ ಶಾಟ್ ಹಾಕಿಸಿಕೊಳ್ಳಬೇಕು. ಅಂದರೆ ಆರು ಶಾಟ್​ಗಳನ್ನ ಹಾಕಿಸಿಕೊಂಡರೆ ಪೂರ್ಣ ಲಸಿಕೆ ಆದಂತೆ.
                ಬೆಲೆ ಎಷ್ಟು: ಸದ್ಯ ಇರುವ ಮಾಹಿತಿ ಪ್ರಕಾರ ಕೆಡಿಲಾ ಹೆಲ್ತ್ ಕೇರ್ ಸಂಸ್ಥೆ ತಾನು ತಯಾರಿಸಿರುವ ಈ ಲಸಿಕೆಯನ್ನ ಸರ್ಕಾರಕ್ಕೆ 1,128 ರೂಪಾಯಿಗೆ ಕೊಡಲಿದೆ. ಇದು ಆರು ಶಾಟ್​ಗಳಿರುವ ಮೂರು ಡೋಸ್​ಗಳನ್ನ ಒಳಗೊಂಡಿರುತ್ತದೆ.

              ಭಾರತದಲ್ಲಿರುವ ಲಸಿಕೆಗಳು: ಕೋವಿಶೀಲ್ಡ್, ಕೋವ್ಯಾಕ್ಸಿನ್, ಜಾನ್ಸನ್ ಅಂಡ್ ಜಾನ್ಸನ್, ಸ್ಪುಟ್ನಿಕ್ ವಿ, ಮಾಡರ್ನಾ ಮತ್ತು ಈಗ ಝೈಡಸ್ ಕೆಡಿಲಾ (ZyCoV-D) ಲಸಿಕೆಗಳು ಸದ್ಯ ಭಾರತದಲ್ಲಿ ಬಳಕೆಗೆ ಅನುಮತಿಸಲ್ಪಟ್ಟಿವೆ. ಇದರಲ್ಲಿ ಕೋವ್ಯಾಕ್ಸಿನ್ ಮತ್ತು ಝೈಡಸ್ ಲಸಿಕೆಗಳನ್ನ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ.

            ಭಾರತದಲ್ಲಿ ಮೊದಲು ಬಳಕೆಗೆ ಅನುಮೋದನೆ ಪಡೆದ ಕೋವಿಶೀಲ್ಡ್ ಅನ್ನು ಬ್ರಿಟನ್ ದೇಶದ ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಸೀರಂ ಸಂಸ್ಥೆ ಇದರ ಉತ್ಪಾದನೆ ಮಾಡುತ್ತಿದೆ. ಇನ್ನು, ಸ್ಪುಟ್ನಿಕ್ ವಿ ಲಸಿಕೆ ರಷ್ಯಾದ ಫಾರ್ಮಾ ಸಂಸ್ಥೆಯಿಂದ ಅಭಿವೃದ್ಧಿಯಾಗಿದೆ. ಜಾನ್ಸನ್ ಅಂಡ್ ಜಾನ್ಸನ್ ಮತ್ತು ಮಾಡರ್ನಾ ಲಸಿಕೆಗಳು ವಿದೇಶಗಳಲ್ಲಿ ಅಭಿವೃದ್ಧಿ ಆಗಿರುವುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries