ಕಾಸರಗೋಡು: ಇತ್ತೀಚೆಗಷ್ಟೇ ಹಣ್ಣು, ತರಕಾರಿಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ ಕಲ್ಯಾಣ ಮತ್ತು ಕೃಷಿ ಅಭಿವೃದ್ಧಿ ಇಲಾಖೆ ಜಾರಿಗೆ ತಂದಿರುವ ಟೊಮೇಟೊ ಬಂಡಿ ಯೋಜನೆಯಿಂದ ಜನತೆಗೆ ನಿರಾಳತೆ ಒದಗಿದೆ. ಸ್ಥಳೀಯ ರೈತರಿಂದ ಸಂಗ್ರಹಿಸಿದ ಸ್ಥಳೀಯ ತರಕಾರಿಗಳು ಮತ್ತು ಹಾರ್ಟಿ ಕಾರ್ಪ್‍ನಿಂದ ತರಕಾರಿ ಮತ್ತು ಹಣ್ಣಿನ ಉತ್ಪನ್ನಗಳು ಬಂಡಿಗಳಲ್ಲಿ ಸುಲಭವಾಗಿ ಲಭ್ಯವಿವೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಜನರಿಗೆ ತರಕಾರಿಗಳನ್ನು ತಲುಪಿಸಲಾಗುತ್ತದೆ.
ವಿವಿಧ ಬ್ಲಾಕ್ ಪಂಚಾಯಿತಿಗಳಲ್ಲಿ ಸಂಚರಿಸುವ ಬಂಡಿಯಲ್ಲಿ ಎಲ್ಲ ತರಕಾರಿಗಳಿಗೂ ಹೆಚ್ಚಿನ ಬೇಡಿಕೆ ಇದೆ. ಪ್ರತಿ ಕೇಂದ್ರದಲ್ಲೂ ಟೊಮೇಟೊ ಬಂಡಿಗಳಿಗೆ ಭರ್ಜರಿ ಸ್ವಾಗತ ದೊರೆಯುತ್ತಿದೆ. ನೀಲೇಶ್ವರ, ಕಾಸರಗೋಡು ಸೋಮವಾರ, ಕಾಞಂಗಾಡ್, ಉಪ್ಪಳ ಮಂಗಳವಾರ, ನೀಲೇಶ್ವರ, ಕಾಸರಗೋಡು ಬುಧವಾರ, ಕಾಞಂಗಾಡ್, ಉಪ್ಪಳ ಗುರುವಾರ, ಪರಪ್ಪ, ಕುಂಡಂಗುಳಿ ಶನಿವಾರ ಮತ್ತು ಕಾಞಂಗಾಡ್ ಮತ್ತು ಕಾಸರಗೋಡುಗಳಿಗೆ ಭಾನುವಾರ ತಲುಪಲಿದೆ. ಜನವರಿ 1 ರವರೆಗೆ ಟೊಮೆಟೊ ಬಂಡಿ ಸೇವೆ ಲಭ್ಯವಿದೆ. ಬಂಡಿಯಲ್ಲಿ ಟೊಮ್ಯಾಟೊ, ಈರುಳ್ಳಿ, ಬೀನ್ಸ್, ಹಸಿಮೆಣಸಿನಕಾಯಿ, ಈರುಳ್ಳಿ, ಸೌತೆಕಾಯಿ, ಕ್ಯಾರೆಟ್, ಸೊಪ್ಪುಗಳು, ಕುಂಬಳಕಾಯಿ, ಸೌತೆಕಾಯಿ, ಮರಗೆಣಸು ಸೇರಿದಂತೆ ವಿವಿಧ ತರಕಾರಿಗಳು ಲಭ್ಯ. ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾ ರಾಣಿ ಮಾತನಾಡಿ, ಜ.1ರವರೆಗೆ ಜಿಲ್ಲೆಯ ಎಲ್ಲ ಕೃಷಿ ಕಚೇರಿ ವ್ಯಾಪ್ತಿಯಲ್ಲಿ ಕೃಷಿ ಇಲಾಖೆಯ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಮಾರುಕಟ್ಟೆ ನಡೆಯಲಿದೆ ಎಮದು ಮಾಹಿತಿ ನೀಡಿರುವರು.




