HEALTH TIPS

ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು 9 ತಿಂಗಳವರೆಗೆ 3ನೇ ಡೋಸ್ ಅಗತ್ಯವಿಲ್ಲ

              ನವದೆಹಲಿ: ಓಮಿಕ್ರಾನ್ ರೂಪಾಂತರಿ ಕಾಣಿಸಿಕೊಳ್ಳುತ್ತಿದ್ದಂತೆ ಹಲವು ದೇಶಗಳಲ್ಲಿ 'ಬೂಸ್ಟರ್ ಡೋಸ್' ನೀಡುವ ಕುರಿತು ಸಿದ್ಧತೆ ಶುರುವಾಗಿದೆ. ಆದರೆ ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು 9 ತಿಂಗಳವರೆಗೂ ಮೂರನೇ ಡೋಸ್‌ನ ಅಗತ್ಯವಿಲ್ಲ ಎಂದು ಐಸಿಎಂಆರ್‌ನ ಮಹಾನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.

               ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿರುವ ಅವರು, ಸರ್ಕಾರವು ಬೂಸ್ಟರ್ ಡೋಸ್ ನೀಡುವ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಒಂದೊಮ್ಮೆ ಬೂಸ್ಟರ್ ಡೋಸ್ ನೀಡುವುದಾದರೂ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದು ಕನಿಷ್ಠ 9 ತಿಂಗಳಾದರೂ ಆಗಿರಲೇಬೇಕು.
              ಸಭೆಯಲ್ಲಿ ಐಸಿಎಂಆರ್ ಡಿಜಿ ರಾಜೇಶ್ ಭೂಷಣ್, ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಜತೆಗೆ ಹಲವು ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಕಾಯಗಳ ಮಟ್ಟವನ್ನು ಅಳೆಯಬಾರದು ಎಂದು ಹಲವಾರು ಏಜೆನ್ಸಿಗಳು ಶಿಫಾರಸು ಮಾಡಿವೆ. ಆದರೆ ಮುಖ್ಯವಾದ ತಿಳುವಳಿಕೆಯೆಂದರೆ ಎರಡೂ ಡೋಸ್‌ಗಳಿಗೆ ಸಂಪೂರ್ಣ ವ್ಯಾಕ್ಸಿನೇಷನ್ ಮಾಡುವುದು ಅತ್ಯಗತ್ಯ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.
               ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಭಾರತದ ವಯಸ್ಕ ಜನಸಂಖ್ಯೆಯ ಶೇ. 20ರಷ್ಟು ಜನರು ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಿದ್ದಾರೆ. ಇನ್ನು ಶೇ. 62ರಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ. ಅಲ್ಲದೆ, 99 ಪ್ರತಿಶತ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದಿದ್ದಾರೆ. 82 ಪ್ರತಿಶತ ಅರ್ಹ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ತೆಗೆದುಕೊಂಡಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ, ದೇಶದ ಲಸಿಕೆಗೆ ಅರ್ಹವಾಗಿರುವ ಜನರಲ್ಲಿ ಸುಮಾರು 82 ಪ್ರತಿಶತದಷ್ಟು ಜನರು ತಮ್ಮ ಮೊದಲ ಕೋವಿಡ್ -19 ಡೋಸ್ ಪಡೆದುಕೊಂಡಿದ್ದಾರೆ. ಅದರಲ್ಲಿ ಸುಮಾರು 43 ಪ್ರತಿಶತದಷ್ಟು ಜನರು ಎರಡೂ ಡೋಸ್‌ಗಳನ್ನು ತೆಗೆದುಕೊಂಡು, ಪೂರ್ಣಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
               ಇತ್ತೀಚಿನ ದಿನಗಳಲ್ಲಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವರು ಬೂಸ್ಟರ್‌ ಡೋಸ್​ಗಳಿಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ, ''ಇಂತಹ ವಿಚಾರದಲ್ಲಿ ಕೇಂದ್ರ ನೇರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಬೂಸ್ಟರ್ ಲಸಿಕೆ ನೀಡಬೇಕು ಎಂದು ಐಸಿಎಂಆರ್ ಹೇಳಿದರೆ, ನಂತರ ಅದನ್ನು ಪರಿಗಣಿಸುತ್ತೇವೆ. ಪ್ರಸ್ತುತದ ಗುರಿ ದೇಶದ ಎಲ್ಲರಿಗೂ ಲಸಿಕೆ ನೀಡುವುದಾಗಿದೆ. ಅದು ಮುಗಿದ ನಂತರ, ಬೂಸ್ಟರ್‌ಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಮ್ಮಲ್ಲಿ ಲಸಿಕೆ ಸಾಕಷ್ಟು ದಾಸ್ತಾನಿದೆ'' ಎಂದು ಹೇಳಿದ್ದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries