ತಿರುವನಂತಪುರ: ರಾಜ್ಯದಲ್ಲಿ ಇಂದು 2846 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎರ್ನಾಕುಳಂ 526, ತಿರುವನಂತಪುರ 507, ಕೋಝಿಕ್ಕೋಡ್ 348, ಕೊಟ್ಟಾಯಂ 332, ತ್ರಿಶೂರ್ 185, ಪತ್ತನಂತಿಟ್ಟ 179, ಕೊಲ್ಲಂ 141, ಕಣ್ಣೂರು 136, ಆಲಪ್ಪುಳ 128, ಇಡುಕ್ಕಿ 100, ಮಲಪ್ಪುರಂ 91, ವಯನಾಡ್ 69, ಕಾಸರಗೋಡು 53, ಪಾಲಕ್ಕಾಡ್ 51 ಎಂಬಂತೆ ಸೋಂಕು ದೃಢಪಡಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ 69,852 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್‍ಗಳಿವಡೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,12,284 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,08,593 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 3,691 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 447 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಸ್ತುತ, 20,456 ಕೋವಿಡ್ ಪ್ರಕರಣಗಳಲ್ಲಿ, ಕೇವಲ 10.6 ಶೇಕಡ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ 12 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 199 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 47,277ಕ್ಕೆ ಏರಿಕೆಯಾಗಿದೆ.
ಇಂದು ಸೋಂಕು ಪತ್ತೆಯಾದವರಲ್ಲಿ 20 ಮಂದಿ ಹೊರ ರಾಜ್ಯದವರು. 2678 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 121 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಇಪ್ಪತ್ತೇಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ.
ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2576 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 634, ಕೊಲ್ಲಂ 115, ಪತ್ತನಂತಿಟ್ಟ 144, ಆಲಪ್ಪುಳ 103, ಕೊಟ್ಟಾಯಂ 121, ಇಡುಕ್ಕಿ 157, ಎರ್ನಾಕು|ಳಂ 402, ತ್ರಿಶೂರ್ 169, ಪಾಲಕ್ಕಾಡ್ 135, ಮಲಪ್ಪುರಂ 106, ಕೋಝಿಕ್ಕೋಡ್ 260, ವಯನಾಡ್ 19, ಕಣ್ಣೂರು 161, ಕಾಸರಗೋಡು 50 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 20,456 ಮಂದಿಗೆ ಸೋಂಕು ದೃಢಪಟ್ಟಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51,73,656 ಮಂದಿ ಕೊರೊನಾದಿಂದ ಮುಕ್ತರಾಗಿದ್ದಾರೆ.

