HEALTH TIPS

ಸುಧೀರ್ಘ ದಿನಗಳ ಬಳಿಕ ಪುಟಾಣಿಗಳು ಮತ್ತೆ ಅಂಗನವಾಡಿಗಳಿಗೆ: ಜನವರಿ 3 ರಿಂದ ಅಂಗನವಾಡಿಗಳ ಪುನರಾರಂಭ: ಮಾರ್ಗಸೂಚಿ ಪ್ರಕಟಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

                            

            ತಿರುವನಂತಪುರ: ಜನವರಿ 3 ರಿಂದ ಅಂಗನವಾಡಿಗಳನ್ನು ತೆರೆಯಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಟಿಸಿದೆ. ಇದಕ್ಕಾಗಿ ‘ಪುಟಾಣಿಗಳು  ಅಂಗನವಾಡಿಗಳಿಗೆ’ ಎಂಬ ವಿಶೇಷ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಿದೆ. ಶನಿವಾರವೂ ಅಂಗನವಾಡಿಗಳು ಕಾರ್ಯನಿರ್ವಹಿಸಲಿದೆ ಎಂದು ಇಲಾಖೆ ತಿಳಿಸಿದೆ.

                      ಅಂಗನವಾಡಿಗಳು ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ತೆರೆದಿರುತ್ತವೆ. ಮಕ್ಕಳನ್ನು 1.5 ಮೀಟರ್ ಅಂತರದಲ್ಲಿ ಕುಳ್ಳಿರಿಸುವಂತೆ  ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಂಗನವಾಡಿಗೆ ಪ್ರವೇಶಿಸದಂತೆ ಪೋಷಕರಿಗೆ ಮಾರ್ಗದರ್ಶನದಲ್ಲಿ ವಿಶೇಷ ಸೂಚನೆಗಳಿವೆ. 

          ಹಂತ ಹಂತವಾಗಿ ಅಂಗನವಾಡಿಗಳನ್ನು ತೆರೆಯಲಾಗುತ್ತಿದೆ. ಮೊದಲ ಹಂತದಲ್ಲಿ, ವಿಕಲಾಂಗ ಮಕ್ಕಳನ್ನು ಹೊರಗಿಡಲಾಗುತ್ತದೆ. 15 ಮಕ್ಕಳಿರುವ ಅಂಗನವಾಡಿಗಳಲ್ಲಿ ಪೋಷಕರ ಅಭಿಪ್ರಾಯವನ್ನು ಪರಿಗಣಿಸಿ ಬ್ಯಾಚ್‍ಗಳಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ಮಕ್ಕಳನ್ನು ಸಾಗಿಸುವ ವಾಹನಗಳ ಸಿಬ್ಬಂದಿ ಮತ್ತು ಚಾಲಕರು ಎರಡು ಡೋಸ್ ಲಸಿಕೆಯನ್ನು ಪqದಿರಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಫಾರಸು ಮಾಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries