HEALTH TIPS

ಕೇರಳದಲ್ಲಿ ಮತ್ತೆ ಏರಿಕೆ ಕಂಡ ಕೊರೊನಾ: ಇಂದು 4006 ಮಂದಿಗೆ ಕೋವಿಡ್ ಪತ್ತೆ: ಮರಣ ಪ್ರಮಾಣದಲ್ಲೂ ಏರಿಕೆ!

                                                     

                 ತಿರುವನಂತಪುರ: ರಾಜ್ಯದಲ್ಲಿ ಇಂದು 4006 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ತಿರುವನಂತಪುರ 830, ಎರ್ನಾಕುಳಂ 598, ಕೋಝಿಕ್ಕೋಡ್ 372, ಕೊಟ್ಟಾಯಂ 364, ತ್ರಿಶೂರ್ 342, ಕೊಲ್ಲಂ 260, ಕಣ್ಣೂರು 237, ಇಡುಕ್ಕಿ 222, ಆಲಪ್ಪುಳ 174, ಪತ್ತನಂತಿಟ್ಟ 158, ಮಲಪ್ಪುರಂ 132, ವಯನಾಡ್ 132, ಪಾಲಕ್ಕಾಡ್ 115, ಕಾಸರಗೋಡು 70  ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

           ಕಳೆದ 24 ಗಂಟೆಗಳಲ್ಲಿ 65,704 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಸಾಪ್ತಾಹಿಕ ಸೋಂಕಿನ ಜನಸಂಖ್ಯೆಯ ಅನುಪಾತ 10 ಕ್ಕಿಂತ ಹೆಚ್ಚಿನ 5 ಸ್ಥಳೀಯಾಡಳಿತ ಪ್ರದೇಶಗಳಲ್ಲಿ 6 ವಾರ್ಡ್‍ಗಳಿವೆ. ಇಲ್ಲಿ ಕಟ್ಟುನಿಟ್ಟಿನ ನಿಯಂತ್ರಣ ಇರಲಿದೆ.

                 ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,49,628 ಮಂದಿ ಜನರು ನಿಗಾದಲ್ಲಿದ್ದಾರೆ. ಇವರಲ್ಲಿ 1,45,536 ಮಂದಿ ಮನೆ/ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಮತ್ತು 4,092 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ. ಒಟ್ಟು 203 ಮಂದಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ, 35,234 ಕೋವಿಡ್ ಪ್ರಕರಣಗಳಲ್ಲಿ, ಕೇವಲ 7.8 ಶೇಕಡಾ ಜನರು ಮಾತ್ರ ಆಸ್ಪತ್ರೆಗಳು / ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

              ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ  125 ಮಂದಿ ಮೃತರಾಗಿದ್ದಾರೆ. ಇದಲ್ಲದೆ, ಸುಪ್ರೀಂ ಕೋರ್ಟ್‍ನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿದ 157 ಸಾವುಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 43,626ಕ್ಕೆ ಏರಿಕೆಯಾಗಿದೆ. ಇಂದು ಸೋಂಕು ಪತ್ತೆಯಾದವರಲ್ಲಿ 14 ಮಂದಿ ಹೊರ ರಾಜ್ಯದವರು. 3750 ಮಂದಿ ಜನರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ. 207 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇಂದು ಮೂವತ್ತೈದು ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. 

                 ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3898 ಮಂದಿ ಜನರು ಗುಣಮುಖರಾಗಿದ್ದಾರೆ. ತಿರುವನಂತಪುರ 738, ಕೊಲ್ಲಂ 633, ಪತ್ತನಂತಿಟ್ಟ 139, ಆಲಪ್ಪುಳ 136, ಕೊಟ್ಟಾಯಂ 180, ಇಡುಕ್ಕಿ 184, ಎರ್ನಾಕುಳಂ 508, ತ್ರಿಶೂರ್ 222, ಪಾಲಕ್ಕಾಡ್ 50, ಮಲಪ್ಪುರಂ 218, ಕೋಝಿಕ್ಕೋಡ್ 419, ವಯನಾಡ್ 125, ಕಣ್ಣೂರು 267, ಕಾಸರಗೋಡು 79 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 35,234 ಮಂದಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 51,24,899 ಮಂದಿ ಜನರು ಕೊರೋನಾದಿಂದ ಮುಕ್ತರಾಗಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries