ನವದೆಹಲಿ: 'ದೇಶದಲ್ಲಿ ಶೇ 55ರಷ್ಟು ಅರ್ಹ ವಯಸ್ಕರಿಗೆ ಕೋವಿಡ್-19 ವಿರುದ್ಧ ಎರಡೂ ಡೋಸ್ ಲಸಿಕೆ ನೀಡಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ತಿಳಿಸಿದ್ದಾರೆ.
0
samarasasudhi
ಡಿಸೆಂಬರ್ 14, 2021
ನವದೆಹಲಿ: 'ದೇಶದಲ್ಲಿ ಶೇ 55ರಷ್ಟು ಅರ್ಹ ವಯಸ್ಕರಿಗೆ ಕೋವಿಡ್-19 ವಿರುದ್ಧ ಎರಡೂ ಡೋಸ್ ಲಸಿಕೆ ನೀಡಲಾಗಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರು ತಿಳಿಸಿದ್ದಾರೆ.
ಆರೋಗ್ಯ ಸಚಿವಾಲಯ ಈ ಕುರಿತು ಹೇಳಿಕೆ ನೀಡಿದ್ದು, ಶೇ 55.52ರಷ್ಟು ಅರ್ಹ ಜನರಿಗೆ ಎರಡು ಡೋಸ್, ಶೇ 87ರಷ್ಟು ಮಂದಿಗೆ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 66,98,601 ಲಸಿಕೆ ಡೋಸ್ ನೀಡಲಾಗಿದೆ. ತಾತ್ಕಾಲಿಕ ವರದಿ ಅನುಸಾರ 133.88 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದೆ.