HEALTH TIPS

ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ ರಕ್ಷಣಾ ಸಚಿವಾಲಯದಲ್ಲಿವೆ ಉದ್ಯೋಗಾವಕಾಶ: 97 ಹುದ್ದೆಗಳಿಗೆ ಆಹ್ವಾನ

       ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ, ಹಿಂದಿ ಭಾಷಾ ಜ್ಞಾನ ಹಾಗೂ ಪದವೀಧರರಿಗೆ ರಕ್ಷಣಾ ಸಚಿವಾಲಯದಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ. ಪುಣೆಯಲ್ಲಿರುವ ಡಿಫೆನ್ಸ್ ಎಸ್ಟೇಟ್ ಆರ್ಗನೈಸೇಷನ್​ನಲ್ಲಿ ವಿವಿಧ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಒಟ್ಟು ಹುದ್ದೆಗಳು: 97

ಹುದ್ದೆ ವಿವರ

*ಸಬ್ ಡಿವಿಷನ್ ಆಫೀಸರ್ (ಗ್ರೇಡ್ ಐಐ) - 89

ಎಸ್ಸೆಸ್ಸೆಲ್ಸಿ (ಮೆಟ್ರಿಕ್ಯುಲೇಷನ್) ಉತ್ತೀರ್ಣ ಅಥವಾ ಸರ್ವೆಯಿಂಗ್/ ಡ್ರಾಫ್ಟ್್ಸುನ್​ಶಿಪ್ (ಸಿವಿಲ್)ನಲ್ಲಿ ಡಿಪ್ಲೊಮಾ ಮಾಡಿರಬೇಕು. ಕನಿಷ್ಠ 15 ವರ್ಷ ಗರಿಷ್ಠ 27 ವರ್ಷವಯೋಮಿತಿ ನಿಗದಿಪಡಿಸಿದ್ದು, ಮಾಸಿಕ 5,200- 20,200 ರೂ.ವರೆಗಿನ ವೇತನ ನಿಗದಿಪಡಿಸಲಾಗಿದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 36, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 23, ಎಸ್ಸಿಗೆ 10, ಎಸ್ಟಿಗೆ 4, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 16 ಸ್ಥಾನ ಮೀಸಲಿರಿಸಿದ್ದು, ಇದರಲ್ಲಿ 3 ಸ್ಥಾನ ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ.

* ಜೂನಿಯರ್ ಹಿಂದಿ ಟ್ರಾನ್ಸ್​ಲೇಟರ್- 7

ಹಿಂದಿ/ ಇಂಗ್ಲಿಷ್​ನಲ್ಲಿ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು/ ಪದವಿಯಲ್ಲಿ ಇಂಗ್ಲಿಷ್/ ಹಿಂದಿ ವಿಷಯವನ್ನು ಓದಿರಬೇಕು. ಮಾಸಿಕ 9,300- 34,800 ರೂ. ವೇತನ ಇದೆ. ಸಾಮಾನ್ಯವರ್ಗದ ಅಭ್ಯರ್ಥಿಗೆ 5 ಸ್ಥಾನ, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗೆ 2 ಸ್ಥಾನ ಮೀಸಲಿರಿಸಿದ್ದು, 1 ಸ್ಥಾನ ಅಂಗವಿಕಲ ಅಭ್ಯರ್ಥಿಗೆ ಕಾಯ್ದಿರಿಸಲಾಗಿದೆ. ಕನಿಷ್ಠ 18 ವರ್ಷ, ಗರಿಷ್ಠ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

* ಹಿಂದಿ ಟೈಪಿಸ್ಟ್ - 1

ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದು, ಹಿಂದಿ ಟೈಪಿಂಗ್​ನಲ್ಲಿ ನಿಮಿಷಕ್ಕೆ 25 ಪದಕ್ಕಿಂತ ಕಡಿಮೆ ವೇಗ ಇರಬಾರದು. ಆರ್ಥಿಕವಾಗಿ ಹಿಂದುಳಿದ ಅಂಗವಿಕಲ ಅಭ್ಯರ್ಥಿಗೆ ಈ ಸ್ಥಾನ ಮೀಸಲಿರಿಸಿದ್ದು, ಮಾಸಿಕ 5,200-20,200 ರೂ. ವೇತನ ಇದೆ. ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ: ಹುದ್ದೆಗಳಿಗೆ ಅನುಗುಣವಾಗಿ ಲಿಖಿತ ಪರೀಕ್ಷೆ ನಡೆಸಲಾಗುವುದು. ಅನುವಾದ ಪರೀಕ್ಷೆ, ಟೈಪಿಂಗ್ ಪರೀಕ್ಷೆ ನಡೆಸಿ ಅಂತಿಮ ಆಯ್ಕೆ ಮಾಡಲಾಗುವುದು. ಲಿಖಿತ ಪರೀಕ್ಷೆಯು ಪುಣೆ, ದೆಹಲಿ, ಕೋಲ್ಕತ್ತದಲ್ಲಿ ನಡೆಯಲಿದೆ. ಯಾವುದೇ ಸಂದರ್ಶನ ಇರುವುದಿಲ್ಲ.

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ, ಅರ್ಥಿಕವಾಗಿ ದುರ್ಬಲವಾಗಿರುವ, ಮಹಿಳಾ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 200 ರೂ. ಶುಲ್ಕ ಅನ್ನು ಡಿಡಿ ಮೂಲಕ ಪಾವತಿಸತಕ್ಕದ್ದು.

ಅರ್ಜಿ ಸಲ್ಲಿಸಲು ಕೊನೇ ದಿನ: 15.1.2022

ಅರ್ಜಿ ಸಲ್ಲಿಕೆ ವಿಳಾಸ: Principal Director, Defence Estates, Southern Command, Near ECHS Polyclinic, Kondhwa Road, Pune (Maharashtra) - 411 040

ಅಧಿಸೂಚನೆಗೆ: https://bit.ly/3dzB7aQ

ಮಾಹಿತಿಗೆ: https://delhi.cantt.gov.in



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries