HEALTH TIPS

ಮಿತಭಾಷಿ, ಸ್ಕೂಟರ್ ಓಡಿಸುತ್ತಿದ್ದವನ ಆಸ್ತಿ ಸಾವಿರ ಕೋಟಿ ರೂ.: ನೆರೆಹೊರೆಯವರು ಕಕ್ಕಾಬಿಕ್ಕಿ: ಇದು ಮುಗಿಯದ ಕಥೆಯ ಆರಂಭ!

      ನವದೆಹಲಿ: ಆತ ಸರಳ ಸಜ್ಜನಿಕೆಯ ವ್ಯಕ್ತಿ. ಎಲ್ಲರಂತೆ ಸ್ಕೂಟರ್ ಓಡಿಸುತ್ತಿದ್ದ, ಸಹಜವಾಗಿಯೇ ಕಾಣುತ್ತಿದ್ದ. ಹೀಗೆ ಸರಳವಾಗಿ ಅಕ್ಕಪಕ್ಕದವರ ಜೊತೆ ಸ್ನೇಹದಿಂದ ಮೌನಿಯಾಗಿ ಯಾರೊಂದಿಗೂ ದ್ವೇಷವಿಲ್ಲದೇ ಮಿತಭಾಷಿಯಾಗಿದ್ದವನು ಶತಕೋಟಿ ಸಂಪತ್ತಿನ ಒಡೆಯನಾಗಿದ್ದ. ಈತ ಸುಗಂಧ ದ್ರವ್ಯಗಳ ಉದ್ಯಮಿ 'ಪಿಯೂಷ್ ಜೈನ್'. ಇತ್ತೀಚಿಗಷ್ಟೆ ಆತನ ಮನೆ ಮೇಲೆ ಐಟಿ ದಾಳಿ ನಡೆದಿತ್ತು.
        ಪಿಯೂಷ್ ಜೈನ್, ಕನೌಜ್ ವಾಸಿ. ಕೋಟಿ ರೂ.ಗಳ ಒಡೆಯನಾಗಿದ್ದರೂ ಸರಳತೆಯಿಂದ ಬದುಕುತ್ತಿದ್ದ. ಇವನು ಇಷ್ಟೊಂದು ಸಿರಿವಂತ ಅಂತ ಗೊತ್ತಾಗಿದ್ದೇ ದಾಳಿ ನಡೆದಾಗ ಮಾತ್ರ. ಯುಪಿಯ ಕನೌಜ್‌ನಲ್ಲಿರುವ ಆತನ ಮೂರು ಮನೆಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್‌ಟಿ ಗುಪ್ತಚರ ಘಟಕದ ಮೂಲಗಳು ತಿಳಿಸಿವೆ.
         ನೆರೆಹೊರೆಯವರಿಗೆ ಆಘಾತ:
     ಕನೌಜ್‌ನಲ್ಲಿರುವ ಜಿಎಸ್‌ಟಿ ತಂಡವು ಪಿಯೂಷ್ ಜೈನ್ ಮನೆಯ ಸಮೀಪ ವಾಸಿಸುವ ನೆರೆಹೊರೆಯವರೊಂದಿಗೆ ಮಾತನಾಡಿದಾಗ, ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ನೆರೆಹೊರೆಯವರಿಂದ ಬಂದ ಮಾಹಿತಿ ಪ್ರಕಾರ, ಪಿಯೂಷ್ ಜೈನ್ ಅವರ ಅಜ್ಜನ ಹೆಸರು ಫೂಲ್ ಚಂದ್ ಜೈನ್. ಬಟ್ಟೆಗಳ ಮೇಲೆ ಚಿತ್ರಗಳನ್ನು ಮುದ್ರಿಸುವ ವ್ಯಾಪಾರವನ್ನು ಹೊಂದಿದ್ದರಂತ.ಪಿಯೂಷ್ ಜೈನ್ ತಂದೆ ಬಟ್ಟೆಗಳ ಪ್ರಿಂಟಿಂಗ್ ಕೆಲಸ ಮಾಡುತ್ತಿದ್ದರು.ಬಳಿಕ ಪಿಯೂಷ್ ಮುಂಬೈನ ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸವನ್ನು ಪ್ರಾರಂಭಿಸಿದರು.
          ರಸಾಯನಶಾಸ್ತ್ರ ಪರಿಣತ:      
                       ರಸಾಯನಶಾಸ್ತ್ರದಲ್ಲಿ ಪಾರಂಗತರಾಗಿದ್ದ ಜೈನ್ ಸೋಪ್ ಮತ್ತು ಡಿಟರ್ಜೆಂಟ್ ಇತ್ಯಾದಿಗಳ ಸಂಯುಕ್ತಗಳನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದರು. ನಂತರ ಗುಟ್ಕಾ ಮತ್ತು ಪಾನ್ ಮಸಾಲಾ ವ್ಯಾಪಾರದಲ್ಲಿ ತೊಡಗಿದ್ದರು.ವ್ಯಾಪಾರದ ಬಲದಿಂದ ಧನ್ ಕುಬೇರ್ ಆದ ಸುಗಂಧ ದ್ರವ್ಯದ ಉದ್ಯಮಿ ಪಿಯೂಷ್ ಜೈನ್ ಅತ್ಯಂತ ಸರಳ ಜೀವನವನ್ನು ನಡೆಸುತ್ತಾ ತುಂಬಾ ಸರಳವಾಗಿ ಬದುಕುತ್ತಿದ್ದರು ಅಂತ ಅವರ ನೆರೆಹೊರೆಯವರು ಹೇಳಿದ್ದಾರೆ. 
              500 ಕೀಗಳು ಪತ್ತೆ!:
        ಸುಗಂಧ ದ್ರವ್ಯ ಉದ್ಯಮದ ಭಾಗವಾಗಿರುವ ಉತ್ತರ ಪ್ರದೇಶದ ಉದ್ಯಮಿ ಪಿಯೂಷ್ ಜೈನ್ ಮೇಲಿನ ತೆರಿಗೆ ದಾಳಿಯಲ್ಲಿ ಇದುವರೆಗೆ 194.45 ಕೋಟಿ ರೂಪಾಯಿ ನಗದು ಮತ್ತು 23 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) ಸೋಮವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ವೇಳೆ ಡಿಜಿಜಿಐ ತಂಡವು 500 ಕೀಗಳು, 109 ಬೀಗಗಳು ಮತ್ತು 18 ಲಾಕರ್‌ಗಳನ್ನು ಪತ್ತೆ ಮಾಡಿದೆ. ಒಟ್ಟಾರೆಯಾಗಿ, ಪಿಯೂಷ್ ಅವರ ಈ ಎಲ್ಲಾ ಸಂಪತ್ತು ಸುಮಾರು 1000 ಕೋಟಿ ಎಂದು ಅಂದಾಜಿಸಲಾಗಿದೆ.
           ಶ್ರೀಗಂಧದ ಎಣ್ಣೆ ವಶ:
       ಇದಲ್ಲದೆ, ಅಧಿಕಾರಿಗಳು 17 ಕೋಟಿ ರೂಪಾಯಿ ನಗದು ಮತ್ತು 23 ಕೆಜಿ ಚಿನ್ನವನ್ನು ಮತ್ತು 6 ಕೋಟಿ ರೂಪಾಯಿ ಮೌಲ್ಯದ ಅಂದಾಜು 600 ಕೆಜಿ ಶ್ರೀಗಂಧದ ಎಣ್ಣೆಯನ್ನು ಕನೌಜ್‌ನಲ್ಲಿರುವ ಕಾರ್ಖಾನೆಯಿಂದ ವಶಪಡಿಸಿಕೊಂಡಿದ್ದಾರೆ. ಜೈನ್ ತ್ರಿಮೂರ್ತಿ ಓಡೋಕೆಮ್ ಇಂಡಸ್ಟ್ರೀಸ್‌ನ ಪ್ರವರ್ತಕನಾಗಿದ್ದು,ಓಡೋಕೇಮ್ ಸುಗಂಧಗಳಿಗೆ ಸುಗಂಧ ಸಂಯುಕ್ತಗಳನ್ನು ಪೂರೈಸುತ್ತದೆ. ಅಲ್ಲದೇ ಶಿಖರ್ ಬ್ರಾಂಡ್‌ನ ಪಾನ್ ಮಸಾಲಾ ಮತ್ತು ಇತರ ಪರಿಮಳಯುಕ್ತ ತಂಬಾಕು ಉತ್ಪನ್ನಗಳನ್ನು ತಯಾರಿಸುವುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries