HEALTH TIPS

ಈ ಆಹಾರಗಳಿಂದ ಚಳಿಗಾಲದಲ್ಲಿ ಸೈನಸ್‌ ಸಮಸ್ಯೆ ಹೆಚ್ಚಾಗಬಹುದು, ಎಚ್ಚರಿಕೆಯಿಂದಿರಿ!

           ಚಳಿಗಾಲದಲ್ಲಿ ಸೈನಸ್ ರೋಗಿಗಳ ಸಮಸ್ಯೆ ಹೆಚ್ಚುತ್ತದೆ, ಏಕೆಂದರೆ, ತಣ್ಣನೆಯ ಗಾಳಿ ಮೂಗಿಗೆ ಅಡ್ಡಿಯಾಗಿ, ಉಸಿರಾಡಲು ಕಷ್ಟವಾಗುತ್ತದೆ. ಈ ಕಾಯಿಲೆಗೆ ಆರಂಭದಲ್ಲಿಯೇ ಚಿಕಿತ್ಸೆ ನೀಡಿ, ಆಹಾರದ ಬಗ್ಗೆ ಗಮನ ಹರಿಸಿದರೆ, ನಂತರ ರೋಗವು ದೀರ್ಘಕಾಲದ ಹಂತಕ್ಕೆ ಹೋಗುವುದನ್ನು ತಡೆಯಬಹುದು.

           ಕೆಲವು ಆಹಾರಗಳು ಈ ಕಾಯಿಲೆಯಿಂದ ಬಳಲುತ್ತಿರುವ ಜನರಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಸೈನಸ್ ಸಮಸ್ಯೆ ಇರುವವರು ಚಳಿಗಾಲದಲ್ಲಿ ಕೆಲವು ವಿಷಯಗಳನ್ನು ತಪ್ಪಿಸಬೇಕು. ಅವುಗಳಾವುವು ಎಂಬುದನ್ನು ಇಲ್ಲಿ ನೋಡೋಣ.

            ಸೈನಸ್‌ ಎಂದರೇನು?: ಸೈನಸ್ ಎಂದರೆ ಮೂಗಿನ ಎರಡು ಬದಿಯಲ್ಲಿ ಗಾಳಿಯಿಂದ ತುಂಬಿರುವ ಕುಳಿಗಳು. ಅಲರ್ಜಿ, ಶೀತ ಹಾಗೂ ಬ್ಯಾಕ್ಟೀರಿಯಾಗಳಿಂದಾಗಿ ಕೆಲವೊಮ್ಮೆ ಈ ಕುಳಿಗಳು ಮುಚ್ಚಿಹೋಗುತ್ತವೆ. ಇದರಿಂದಾಗಿ ಎದೆಯಲ್ಲಿ ಲೋಳೆಯು ಸಂಗ್ರಹಗೊಳ್ಳಲು ಪ್ರಾರಂಭಿಸಿ, ತಲೆನೋವು ಮತ್ತು ಉಸಿರಾಟದ ತೊಂದರೆಯೂ ಕಂಡುಬರುತ್ತದೆ. ಕೆಲವೊಮ್ಮೆ ಈ ಕಾರಣದಿಂದಾಗಿ, ದವಡೆ ಮತ್ತು ಕಣ್ಣುಗಳ ಸುತ್ತಲಿನ ಪ್ರದೇಶದಲ್ಲಿ ನೋವು ಸಹ ಕಂಡುಬರುತ್ತದೆ. ಸಮಸ್ಯೆ ಗಂಭೀರತೆಯನ್ನು ಪಡೆದುಕೊಂಡಾಗ ಮೆದುಳಿನ ಜ್ವರ, ಮೆನಿಂಜೈಡಿಸ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

             ಸೈನಸ್‌ ಸಮಸ್ಯೆ ಹೆಚ್ಚಿಸುವ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ: ಆಲೂಗಡ್ಡೆ ಮತ್ತು ಮೈದಾ ತಪ್ಪಿಸಿ: ಸೈನಸ್ ಸಮಸ್ಯೆ ಇರುವವರು, ಆಹಾರದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆಯನ್ನು ಕಡಿಮೆ ಮಾಡಿ. ಆಲೂಗಡ್ಡೆ ಮತ್ತು ಮೈದಾ ಹೆಚ್ಚು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಇರುವ ಆಹಾರಗಳಾಗಿವೆ. ಇದು ಉರಿಯೂತವನ್ನು ಹೆಚ್ಚಿಸಲು ಕಾರಣವಾಗಿದೆ. ಆದ್ದರಿಂದ ಇದನ್ನು ಚಳಿಗಾಲದಲ್ಲಿ ಸೇವಿಸದೇ ಇರುವುದು ಉತ್ತಮ.
              ಒಮೆಗಾ -6 ಕೊಬ್ಬಿನಾಮ್ಲಗಳನ್ನು ತಪ್ಪಿಸಿ: ಒಮೆಗಾ -6 ಕೊಬ್ಬಿನಾಮ್ಲಗಳು ಹೆಚ್ಚಾಗಿರುವ ಆಹಾರಗಳನ್ನು ಸೇವಿಸಬೇಡಿ. ಅಂದಹಾಗೇ, ಒಮೆಗಾ -6 ಕೊಬ್ಬಿನಾಮ್ಲಗಳು ಸೂರ್ಯಕಾಂತಿ, ಜೋಳ ಮತ್ತು ಬಾದಾಮಿ ಎಣ್ಣೆಯಲ್ಲಿ ಸಮೃದ್ಧವಾಗಿವೆ. ಆದ್ದರಿಂದ ಈ ಎಣ್ಣೆಗಳಿಗೆ ಪರ್ಯಾಯವಾಗಿ ಇತರ ಆರೋಗ್ಯಕರ ಎಣ್ಣೆಗಳನ್ನು ಆಹಾರಕ್ಕೆ ಬಳಸಿ.
            ಸಂಸ್ಕರಿಸಿದ ಸಕ್ಕರೆ ಬೇಡ: ನಿಮಗೆ ಸೈನಸ್ ಸಮಸ್ಯೆಯಿದ್ದರೆ, ನೀವು ಪೇಸ್ಟ್ರಿಗಳು, ಸೋಡಾ, ಹಣ್ಣಿನ ರಸಗಳು, ಸಿಹಿತಿಂಡಿಗಳು, ಚಾಕೊಲೇಟ್ಗಳಿಂದ ದೂರವಿರಬೇಕು. ಈ ಎಲ್ಲ ವಸ್ತುಗಳ ಸೇವನೆಯಿಂದ ಸೈನಸ್ ಸಮಸ್ಯೆ ಹೆಚ್ಚಾಗಬಹುದು. ಏಕೆಂದರೆ, ಇವುಗಳಲ್ಲಿ ಸಂಸ್ಕರಿಸಿದ ಸಕ್ಕರೆ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಇಂತಹ ಬೇಕರಿ ಪದಾರ್ಥಗಳಿಂದ ದೂರವಿರಿ.
             ಫಾಸ್ಟ್‌ ಫುಡ್‌ ನಿಂದ ದೂರವಿರಿ: ಫಾಸ್ಟ್ ಫುಡ್ ಮೊನೊ ಸೋಡಿಯಂ ಗ್ಲುಟಮೇಟ್ ಅನ್ನು ಹೊಂದಿರುತ್ತದೆ. ಇದು ಸೈನಸ್ ದಟ್ಟಣೆಯನ್ನು ಉಲ್ಬಣಗೊಳಿಸುತ್ತದೆ. ಆದ್ದರಿಂದ ನೀವೇನಾದರೂ, ಈ ಫಾಸ್ಟ್‌ ಫುಡ್‌ ನಂತಹ ಆಹಾರವನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಚಳಿಗಾಲದಲ್ಲಿ ಅವುಗಳಿಂದ ದೂರವಿರುವುದು ಉತ್ತಮ. ಇಲ್ಲವಾದಲ್ಲಿ ನಿಮ್ಮ ಸೈನಸ್‌ ತೊಂದರೆ ಹೆಚ್ಚಾಗಬಹುದು.
         ಡೈರಿ ಉತ್ಪನ್ನಗಳನ್ನು ತಪ್ಪಿಸಿ: ಡೈರಿ ಉತ್ಪನ್ನಗಳು ಅಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಪ್ಪಿಸಿ. ಡೈರಿ ಉತ್ಪನ್ನಗಳು ಮತ್ತು ಸೋಯಾಬೀನ್ಗಳು ಅಲರ್ಜಿಯನ್ನು ಹೆಚ್ಚಿಸಲು ಕಾರಣವಾಗಿವೆ, ಆದ್ದರಿಂದ ಅವುಗಳಿಂದ ದೂರವಿರುವುದು ಉತ್ತಮ.



Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries