HEALTH TIPS

ಪಂಚತಾರಾ ಹೋಟೆಲ್‌ನ ಊಟಕ್ಕೂ, ಅಯೋಧ್ಯೆಯ ಅಂತಿಮ ತೀರ್ಪಿಗೂ ಸಂಬಂಧವಿಲ್ಲ: ರಂಜನ್ ಗೊಗೊಯ್

              ನವದೆಹಲಿ: ಪಂಚತಾರಾ ಹೋಟೆಲ್‌ನಲ್ಲಿ ಊಟ ಹಾಗೂ ವೈನ್ ಕುಡಿದಿರುವುದು ಅಯೋಧ್ಯೆ ತೀರ್ಪಿನ ಸಂಭ್ರಮವಲ್ಲ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸ್ಪಷ್ಟಪಡಿಸಿದ್ದಾರೆ.

              ಅಯೋಧ್ಯೆಯ ಅಂತಿಮ ತೀರ್ಪು ಹಾಗೂ ಪಂಚತಾರಾ ಹೋಟೆಲ್‌ನ ಊಟಕ್ಕೂ ಯಾವುದೇ ಸಂಬಂಧವಿಲ್ಲ ಅದು ಸಂಭ್ರಮವೂ ಆಗಿರಲಿಲ್ಲ. ಅಯೋಧ್ಯೆ ಪ್ರಕರಣದ ವಿಚಾರಣೆಗಾಗಿ ನಾವೆಲ್ಲಾ ನ್ಯಾಯಮೂರ್ತಿಗಳು ಮೂರ್ನಾಲ್ಕು ತಿಂಗಳು ನಿರಂತರವಾಗಿ ಕೆಲಸ ಮಾಡಿದ್ದೆವು. ಎಲ್ಲರಿಗೂ ಸಹಜವಾಗಿ ಒಂದು ಬ್ರೇಕ್ ಬೇಕಿತ್ತು. ಅದಕ್ಕಾಗಿ ನಾವು ಹೋಟೆಲ್‌ನಲ್ಲಿ ಸೇರಿದ್ದೆವು ಹೊರತು ಅದು ಸಂಭ್ರಮವಾಗಿರಲಿಲ್ಲ.

                ಅದನ್ನು ಆ ರೀತಿ ಅರ್ಥೈಸಿಕೊಳ್ಳಬೇಕಾಗಿಯೂ ಇಲ್ಲ ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ತಮ್ಮ ಪುಸ್ತಕದಲ್ಲಿ ಈ ಕುರಿತು ಬರೆದಿದ್ದ ರಂಜನ್ ಗೊಗೊಯ್ ತೀರ್ಪಿನ ಬಳಿಕ ಹೋಟೆಲ್‌ನಲ್ಲಿ ಊಟ ಹಾಗೂ ವೈನ್ ಕುಡಿದಿದ್ದನ್ನು ಉಲ್ಲೇಖಿಸಿದ್ದರು. ಆದರೆ ಇದನ್ನು ಕೆಲವರು ಸಂಭ್ರಮ ಎಂದು ವ್ಯಾಖ್ಯಾನಿಸಿದ್ದರು. ಇದೀಗ ಮಾಧ್ಯಮದವರಿಗೆ ರಂಜನ್ ಗೊಗೊಯ್ ಸ್ಪಷ್ಟನೆ ನೀಡಿದ್ದಾರೆ.
              ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನಿವೃತ್ತರಾಗಿ ನಾಲ್ಕು ತಿಂಗಳ ಬಳಿಕ ಅವರು ರಾಜ್ಯಸಭೆಯನ್ನು ಸೇರಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ನನಗೆ ರಾಜ್ಯಸಭಾ ಸದಸ್ಯರಾಗುವಂತೆ ಕೇಳಿದಾಗ ಯಾವುದೇ ಹಿಂಜರಿಕೆಯಿಲ್ಲದೆ ಒಪ್ಪಿಕೊಂಡೆ. ರಾಜ್ಯಸಭೆಯಲ್ಲಿ ಪ್ರಸ್ತುತ ಕಾನೂನು ವ್ಯವಸ್ಥೆ ಸೇರಿದಂತೆ ಹಲವು ನ್ಯೂನತೆಗಳ ವಿರುದ್ಧ ಧ್ವನಿ ಎತ್ತುವ ಹಂಬಲವಿದೆ. ಒಂದು ವರ್ಷದಿಂದ ರಾಜ್ಯಸಭಾ ಸದಸ್ಯರಾಗಿರುವ ರಂಜನ್ ಅವರ ಹಾಜರಾತಿ ಶೇ.10ರಷ್ಟಿದೆ ಎನ್ನುವ ದೂರುಗಳು ಕೇಳಿಬಂದಿತ್ತು. ಕೊರೊನಾ ಸೋಂಕು ಹೆಚ್ಚಾಗಿದ್ದ ಕಾರಣ ಹಾಜರಾತಿ ಕಡಿಮೆ ಇತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಒಂದು ಅಥವಾ ಎರಡು ಅಧಿವೇಶನದ ಬಳಿಕ ಸದನಕ್ಕೆ ಪತ್ರ ಬರೆದಿದ್ದು, ವೈದ್ಯರ ಸಲಹೆ ಮೇರೆಗೆ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದೆ ಎಂದು ಹೇಳಿದ್ದಾರೆ.


            

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries