ಕೊಚ್ಚಿ: ಕಾರು ಅಪಘಾತದಲ್ಲಿ ಮೃತಪಟ್ಟ ಕೇರಳದ ಮಾಜಿ ಸುಂದರಿ ಅನ್ಸಿ ಕಬೀರ್ ಹಾಗೂ ಇತರರ ಪ್ರಕರಣದಲ್ಲಿ ಮತ್ತೊಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಸೈಜು ತಂಕಚನ್ ನ ಸಹಚರ ಮಹಿಳೆಯನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಸೈಜು ಬಂಧನದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬಳನ್ನು ಬಂಧಿಸಲಾಗಿದೆ.
ಬೆಂಗಳೂರಿನಿಂದ ಸೈಜುಗೆ ಮಾದಕ ದ್ರವ್ಯ ಸಾಗಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಉತ್ತರ ಕೇರಳದ ಅಡಗುತಾಣದಿಂದ ಮಹಿಳೆಯನ್ನು ಬಂಧಿಸಲಾಗಿದೆ. ಸೈಜು ಅವರ ಮೊಬೈಲ್ ಪೋನ್ ನಲ್ಲಿ ರಹಸ್ಯ ಪೋಲ್ಡರ್‍ನಲ್ಲಿ ಅವರೊಂದಿಗೆ ಪಾನಮತ್ತ ಪಾರ್ಟಿಗಳ ದೃಶ್ಯಗಳು ಪತ್ತೆಯಾಗಿವೆ.
ಪೋಲೀಸರ ಪ್ರಕಾರ, ಕೊಚ್ಚಿಯಲ್ಲಿರುವ ಅವರ ನೆಲೆಯು ಪೋರ್ಟ್ ಕೊಚ್ಚಿಯ ಹೋಟೆಲ್ ನಂ.18 ಆಗಿದೆ. ಪ್ರಕರಣದ ಎರಡನೇ ಹಾಗೂ ಮೂರನೇ ಆರೋಪಿ ಸೈಜು ಹಾಗೂ ಹೋಟೆಲ್ ಉದ್ಯಮಿ ರಾಯ್ ನೀಡಿರುವ ಹೇಳಿಕೆಗಳು ವ್ಯತಿರಿಕ್ತವಾಗಿವೆ ಎಂದು ಪೋಲೀಸರು ತಿಳಿಸಿದ್ದಾರೆ. ಹೋಟೆಲ್ ನಂ.18ರಲ್ಲಿ ಪಾರ್ಟಿ ಮುಗಿಸಿ ಹಿಂತಿರುಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಅನ್ಸಿ ಕಬೀರ್ ಮತ್ತಿತರರು ಸಾವನ್ನಪ್ಪಿದ್ದರು.




