ಕಾಸರಗೋಡು: ಹಿರಿಯ ಪತ್ರಕರ್ತ ಕೆ.ಎಂ ಅಹಮ್ಮದ್ ಅವರ ಹೆಸರಲ್ಲಿ ಕಾಸರಗೋಡು ಪ್ರೆಸ್‍ಕ್ಲಬ್ ವತಿಯಿಂದ ನೀಡಲಾಗುವ ಮಾಧ್ಯಮ ಪುರಸ್ಕಾರವನ್ನು ಚಂದ್ರಿಕಾ ದಿನಪತ್ರಿಕೆಯ ಸ್ಪೆಶ್ಯಲ್ ಕರೆಸ್ಪಾಂಡ್ ಜಲೀಲ್ ಕೆ.ಪಿ ಅವರಿಗೆ ಗುರುವಾರ ಪ್ರದಾನ ಮಾಡಲಾಯಿತು. ಕೇರಳದ ಪ್ರಾಚ್ಯವಸ್ತು, ಬಂದರು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ಪ್ರಶಸ್ತಿಪ್ರದಾನ ಮಾಡಿದರು. ಪ್ರೆಸ್‍ಕ್ಲಬ್ ಅಧ್ಯಕ್ಷ ಮಹಮ್ಮದ್ ಹಾಶಿಂ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಪತ್ರಕರ್ತ ವೆಂಕಟೇಶ್ ರಾಮಕೃಷ್ಣನ್ ಅವರು ಕೆ.ಎಂ ಅಹಮ್ಮದ್ ಸಂಸ್ಮರಣಾ ಭಾಷಣ ಮಾಡಿದರು. ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಇ.ಎಸ್. ಸಉಭಾಷ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾ ವಾರ್ತಾ ಅಧಿಕಾರಿ ಮಧುಸೂಧನನ್, ಪತ್ರಕರ್ತ ಕೆ.ಎಂ. ಮುಜೀಬ್ ಉಪಸ್ಥಿತರಿರುವರು. ಪ್ರೆಸ್‍ಕ್ಲಬ್ ಕಾರ್ಯದರ್ಶಿ ಕೆ.ವಿ ಪದ್ಮೇಶ್ ಸ್ವಾಗತಿಸಿದರು. ಕೋಶಾಧಿಕಾರಿ ಶೈಜು ಪಿಲಾತ್ತರ ವಂದಿಸಿದರು.

