ಸಮರಸ ಚಿತ್ರ ಸುದ್ದಿ: ಗ್ಯಾಸ್ ಸಿಲಿಂಡರ್ ಬೆಲೆಯೇರಿಕೆ ವಿರೋಧಿಸಿ ಹೋಟೆಲ್ ಮಾಲಿಕರ ಸಂಘಟನೆ ಕಾಸರಗೋಡು ಘಟಕ ವತಿಯಿಂದ ಕಾಸರಗೋಡು ನಗರದಲ್ಲಿ ಪಂಜಿನ ಮೆರವಣಿಗೆ ಶುಕ್ರವಾರ ರಾತ್ರಿ ಜರುಗಿತು. ಸಂಘಟನೆ ಜಿಲ್ಲಾ ಸಮಿತಿ ಕಾರ್ಯದರ್ಶಿ ನಾರಾಯಣ ಪೂಜಾರಿ ಉದ್ಘಾಟಿಸಿದರು. ಘಟಕ ಅಧ್ಯಕ್ಷ ವಸಂತ ಕುಮಾರ್, ಪದಾಧಿಕಾರಿಗಳಾದ ಮಹಮ್ಮದ್ ಗಸಾಲಿ, ಆಯುಬ್ ಮುಂತಾದವರು ಉಪಸ್ಥಿತರಿದ್ದರು.

