ಸಮರಸ ಚಿತ್ರ ಸುದ್ದ: ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಲಕ್ಷದೀಪ ಮಹೋತ್ಸವ ಶುಕ್ರವಾರ ಜರುಗಿತು. ಈ ಸಂದರ್ಭ ಷಷ್ಠೀ ಮಹೋತ್ಸವದ ಪೂರ್ವಭಾವಿಯಾಗಿ ಗ್ರಾಮಸ್ಥರ ಕೂಡುವಿಕೆಯೊಂದಿಗೆ ಧಾರಣೆಪಟ್ಟಿ ತಯಾರಿ, ಅಗ್ರಶಾಲೆಯಲ್ಲಿ ಬಾಳೆಗೊನೆಯನ್ನು ಉಬೆಗೆ ಹಾಕುವುದು, ಕಾರ್ತಿಕ ಪೂಜೆ ನಡೆಯಿತು. ಕ್ಷೇತ್ರ ಸಂರಕ್ಷಣಾ ಸಮಿತಿ ಕಾಟುಕುಕ್ಕೆ ವತಿಯಿಂದ ಲಕ್ಷದೀಪೋತ್ಸವ ಆಯೋಜಿಸಲಾಗಿತ್ತು.

