ಬದಿಯಡ್ಕ: ಸಿಐಟಿಯು ಬದಿಯಡ್ಕ ಯೂನಿಟ್ ತಲೆಹೊರೆ ಕಾರ್ಮಿಕರ ನೇತೃತ್ವದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಿಕ್ಸಿ ನೀಡಲಾಯಿತು. ಸಿಐಟಿಯು ತಲೆಹೊರೆ ಕಾರ್ಮಿಕರ ಜಿಲ್ಲಾ ಅಧ್ಯಕ್ಷ ಕೆ.ಮೋಹನನ್ ಬೇಡಗಂ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಎಸ್.ಎನ್.ಮಯ್ಯ, ಸಿಪಿಐಎಂ ನೆಕ್ರಾಜೆ ಲೋಕಲ್ ಸಮಿತಿ ಸದಸ್ಯ ಕೃಷ್ಣ ನಾರಂಪಾಡಿ, ಕುಂಬಳೆ ಏರಿಯಾ ಕಾರ್ಯದರ್ಶಿ ಜಯಪ್ರಕಾಶ್, ಕ್ಷೇತ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

