ಕಾಸರಗೋಡು: ಹಿರಿಯ ಸಾಹಿತಿ, ನಿವೃತ್ತ ಮುಖ್ಯೋಪಾಧ್ಯಾಯ ಎ.ನರಸಿಂಹ ಭಟ್ ಅವರ ಕೃತಿಗಳನ್ನು ಕಾಸರಗೋಡು ಜಿಲ್ಲಾ ಗ್ರಂಥಾಲಯಕ್ಕೆ ಸಮರ್ಪಿಸಲಾಯಿತು.
ಗ್ರಂಥಾಲಯ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನರಸಿಂಹ ಭಟ್ ಅವರ ಪುತ್ರ ಪ್ರಣವ್ ಕುಮಾರ್ ಮತ್ತು ಪುತ್ರಿ ಉಷಾ ಅವರು ಕೃತಿಗಳನ್ನು ಲೈಬ್ರರಿ ಕೌನ್ಸಿಲ್‍ನ ತಾಲೂಕು ಕಾರ್ಯದರ್ಶಿ ಪಿ.ದಾಮೋದರನ್ ಮತ್ತು ಉಪಾಧ್ಯಕ್ಷ ರಾಘವನ್ ವಲಿಯವೀಡು ಅವರಿಗೆ ಹಸ್ತಾಂತರಿಸಿದರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆ.ವಾಮನ ರಾವ್ ಬೇಕಲ್, ರವೀಂದ್ರನ್ ಪಾಡಿ, ಜಗದೀಶ ಕೂಡ್ಲು, ಪ್ರದೀಪ್ ಬೇಕಲ್, ಪ್ರಶಾಂತಿ ಬೀರಂತಬೈಲು, ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ನರಸಿಂಹ ಭಟ್ ಅವರ ಸೃಜನಶೀಲ ಮತ್ತು ಅನುವಾದ ಕೃತಿಗಳ ಸಂಖ್ಯೆ ಮೂವತ್ತೇಳಕ್ಕೆ ತಲಪಿದೆ. ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಅವರು ರಚಿಸಿದ ಮೂವತ್ತು ಕೃತಿಗಳನ್ನು ಜಿಲ್ಲಾ ಗ್ರಂಥಾಲಯಕ್ಕೆ ನೀಡಲಾಯಿತು.

