ಕಾಸರಗೋಡು: ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ನವೆಂಬರ್ ತಿಂಗಳ ವೇತನ ಇನ್ನೂ ಬಿಡುಗಡೆಗೊಳಿಸದಿರುವುದನ್ನು ಪ್ರತಿಭಟಿಸಿ ಕೆಎಸ್‍ಟಿ ಎಂಪ್ಲೋಯೀಸ್ ಸಂಘ್(ಬಿಎಂಎಸ್)ವತಿಯಿಂದ ನಡೆಯುತ್ತಿರುವ ಸರಣಿ ಮುಷ್ಕರದ ಅಂಗವಾಗಿ ಎರಡನೇ ದಿನವಾದ ಶನಿವಾರ ಕಾರ್ಮಿಕರು ಗಂಜಿಊಟ ತಯಾರಿ ಪ್ರತಿಭಟನೆ ನಡೆಸಿದರು.
ಕಾಸರಗೋಡು ಕೆಎಸ್ಸಾರ್ಟಿಸಿ ಡಿಪೋ ಎದುರು ಸಂಘಟನೆ ಕಾರ್ಮಿಕರು ಒಲೆಹಾಕಿ, ಬೆಂಕಿಹಚ್ಚಿ ಗಂಜಿ ಊಟ ತಯಾರಿಸಿದರು. ಸಿಬ್ಬಂದಿಯ ಹಿಸಿವಿನ ವೇದನೆ ಅರಿಯದ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಧೋರಣೆ ಕೈಬಿಟ್ಟು ತಕ್ಷಣ ವೇತನ ವಿತರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಘಟನೆ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಮಣಿಕಂಠನ್, ಜಿಲ್ಲಾ ಕಾರ್ಯಾಧ್ಯಕ್ಷ ಓ.ಟಿ ಸುರೇಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಎಂ. ಪ್ರವೀಣ್, ಕೆ.ವಿ ಗಿರೀಶ್, ಕೆಎಸ್‍ಟಿ ಎಂಪ್ಲೋಯೀಸ್ ಸಂಘ್(ಬಿಎಂಎಸ್)ಜಿಲ್ಲಾಧ್ಯಕ್ಷ ಅನಿಲ್ ಬಿ.ನಾಯರ್, ಎಂ. ಜಯಶೀಲನ್, ಬಿಎಂಎಸ್ ವಲಯ ಕಾರ್ಯದರ್ಶಿ ಪಿ.ದಿನೇಶ್, ಎನ್.ಸಿ.ಟಿ ಗೋಪಿನಾಥನ್ ಉಪಸ್ಥಿತರಿದ್ದರು.




