ಕಾಸರಗೋಡು: ಅಸಂಘಟಿತ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವವರ ರಾಷ್ಟ್ರೀಯ ಮಟ್ಟದಲ್ಲಿ ಡೇಟಾಬೇಸ್ ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಉದ್ಯೋಗ ಸಚಿವಾಲಯ ಆರಂಭಿಸಿರುವ ಇ-ಶ್ರಮ್ ಪೋರ್ಟಲ್‍ಗೆ ಎಲ್ಲ ವಲಯದ ಅಸಂಘಟಿತ ಕಾರ್ಮಿಕರು ಡಿ.31ರ ಮುಂಚಿತವಾಗಿ ನೋಂದಾವಣೆ ನಡೆಸುವಂತೆ ಜಿಲ್ಲಾಧಿಕಾರಿ ಭಂಡಾರಿ ರಣವೀರ್‍ಚಂದ್ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ಇಲಾಖೆಗಳ ಮೂಲಕ ಒಟ್ಟು 101998 ಮಂದಿ ನೋಂದಾವಣೆ ನಡೆಸಿದ್ದಾರೆ.
ಇ-ಶ್ರಮ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸುವವರಿಗೆ ಮುಂದಿನ ದಿನಗಳಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಸವಲತ್ತು ಲಭಿಸಲಿದೆ. 16ರಿಂದ 59ರ ನಡುವಿನ ಪ್ರಾಯದ, ಆದಾಯ ತೆರಿಗೆ ಪಾವತಿಸದಿರುವ, ಪಿಎಫ್, ಇಎಸ್‍ಐ ಸವಲತ್ತು ಪಡೆಯದ ಅಸಂಘಟಿತ ವಲಯದ ಕಾರ್ಮಿಕರಿಗೆ ಯೋಜನೆಯ ಸೌಲಭ್ಯ ದೊರೆಯಲಿದೆ.




