ಉಪ್ಪಳ : ಕೇರಳ ವಿದ್ಯಾಭ್ಯಾಸ ಇಲಾಖೆಗೊಳಪಟ್ಟ ಕೈಟ್ ಸಂಸ್ಥೆ ನಡೆಸಿದÀ "ಮರಳಿ ಶಾಲೆಗೆ" ಛಾಯಾಚಿತ್ರ ಸ್ಪರ್ಧೆಯಲ್ಲಿ ಕಾ¸ರಗೋಡು ಜಿಲ್ಲಾಮಟ್ಟದಲ್ಲಿ ತೃತೀಯ ಬಹುಮಾನ ವಿಜೇತ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಹುಮಾನವನ್ನು ಇತ್ತೀಚೆಗೆ ಉಪ್ಪಳದ ಬಿ ಆರ್ ಸಿ ಯಲ್ಲಿ ಜರಗಿದ ಮಂಜೇಶ್ವರ ಉಪಜಿಲ್ಲಾ ಶಾಲಾ ಮುಖ್ಯ ಶಿಕ್ಷಕರ ಸಮ್ಮೇಳನದಲ್ಲಿ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ ವಿ ಅವರು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಯವರಿಗೆ ನೀಡಿ ಅಭಿನಂದಿಸಿದರು. ಸಮಾರಂಭದಲ್ಲಿ ಮಂಜೇಶ್ವರ ಬಿ ಆರ್ ಸಿ ಯ ಯೋಜನಾ ಸಂಯೋಜಕ ವಿಜಯಕುಮಾರ್ ಪಾವಳ, ಡಯಟ್ ಪ್ರತಿನಿಧಿ ಶಶಿಧರ ಹಾಗೂ ಮುಖ್ಯ ಶಿಕ್ಷಕರ ವೇದಿಕೆಯ ಸಂಯೋಜಕ ಆದಿನಾರಾಯಣ ಭಟ್ ಉಪಸ್ಥಿತರಿದ್ದರು.




