ಬದಿಯಡ್ಕ : ನಾರಂಪಾಡಿ ಫಾತಿಮಾ ಎ . ಎಲ್ . ಪಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಸಭೆ ಇತ್ತೀಚೆಗೆ ನಡೆಯಿತು. ಶಾಲಾ ಸಂಚಾಲಕ ವಂದನೀಯ ಸ್ವಾಮಿ ಜೋನ್ ಬ್ಯಾಪ್ಟಿಸ್ಟ್ ಮೊರಾಸ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ, ಚೆಂಗಳ ಗ್ರಾಮ ಪಂಚಾಯತಿ ಸದಸ್ಯ ಅಬ್ದುಲ್ ಲತೀಫ್, ನಿವೃತ್ತ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರ ಮಣಿಯಾಣಿ ಹಾಗೂ ಶಾಲೆಯ ನಿವೃತ್ತ ಶಿಕ್ಷಕಿ ಸೋಫಿಯಾ ಡಿ ಸೋಜ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು.
ಶಾಲೆಗೆ ಬ್ಯಾಂಡ್ ಸೆಟ್ ಕೊಡುಗೆಯಾಗಿ ನೀಡಿದ ನಿವೃತ್ತ ಸಬ್ ಇನ್ಸ್‍ಪೆಕ್ಟರ್ ರಾಮಚಂದ್ರ ಮಣಿಯಾಣಿ ದಂಪತಿಯನ್ನು ಸನ್ಮಾನಿಸಲಾಯಿತು.ಶಾಲೆಗೆ ಗ್ರಾಮ ಪಂಚಾಯತಿ ನಿಧಿಯಿಂದ ಗಲ್ರ್ಸ್ ಫ್ರೆಂಡ್ಲಿ ಶೌಚಾಲಯ ಮಂಜೂರು ಮಾಡಿಸಿದ ವಾರ್ಡ್ ಸದಸ್ಯ ಅಬ್ದುಲ್ ಲತೀಫ್, ನಿವೃತ್ತ ಶಿಕ್ಷಕಿ ಸಿಸ್ಟರ್ ಸೋಫಿಯಾ ಡಿ ಸೋಜ ಹಾಗೂ ರಕ್ಷಕ - ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ವಿಜಯ್ ಕ್ರಾಸ್ತಾ ರವರನ್ನು ಸನ್ಮಾನಿಸಲಾಯಿತು. ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಮಚಂದ್ರ ಮಣಿಯಾಣಿ ( ಅಧ್ಯಕ್ಷ ) , ರವಿರಾಜ್ ಮತ್ತು ಜೋರ್ಜ್ ಡಿ ಸೋಜ ( ಉಪಾಧ್ಯಕ್ಷರು ), ಸಂತೋಷ್ ಕ್ರಾಸ್ತಾ ( ಕಾರ್ಯದರ್ಶಿ ), ಅರುಣಾ ಕುಮಾರಿ (ಜೊತೆ ಕಾರ್ಯದರ್ಶಿ), ಹರೀಶ್ ನಾರಂಪಾಡಿ(ಖಜಾಂಚಿ) ಯಾಗಿ ಹಾಗೂ 10 ಮಂದಿಯನ್ನು ಒಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಶಾಲಾ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ನಾರಂಪಾಡಿ ಚರ್ಚ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೆಸಿಲ್ಲಾ ಡಿ ಕುನ್ಹಾ ಸ್ವಾಗತಿಸಿ, ದೀಪಾ ಟೀಚರ್ ವಂದಿಸಿದರು . ಶಿಕ್ಷಕ ಜೋನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.



