ಕಾಸರಗೋಡು: ದೀನಬಂಧು ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಸೇವಾ ಕುಟೀರದ ಶಿಲಾನ್ಯಾಸ ಕಾರ್ಯಕ್ರಮ ಫೆ.7 ರಂದು ಪೇಜಾವರ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರು ನೆರವೇರಿಸಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ವಿಷ್ಣು ಪ್ರಕಾಶ ಪಠೇರಿ ಕಾವುಮಠ ಅವರು ಬಿಡುಗಡೆಗೊಳಿಸಿದರು.
ಕಾವುಗೋಳಿ ಶ್ರೀ ಶಿವ ದೇವಸ್ಥಾನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ, ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ, ನ್ಯಾಯವಾದಿ ಸುರೇಶ್, ಉಮೇಶ್ ಸೇವಾ ಭಾರತಿ, ಮಲ್ಲೇಶ್, ಕೆ.ಜಗದೀಶ್ ಕೂಡ್ಲು, ಮನೀಷ್ ಅಡ್ಕತ್ತಬೈಲ್, ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.

