ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಮಾಹೀನ್ ಕೇಳೋಟ್ ಓಸೋಮವಾರ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅವರನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಶಾಲು ಹೊದೆಸಿ ಅಭಿನಂದಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ, ಉಪಾಧ್ಯಕ್ಷ ಅಬ್ಬಾಸ್ ಎಮ್, ಸ್ಥಾಯಿಸಮಿತಿ ಅಧ್ಯಕ್ಷ ರವಿಕುಮಾರ್ ರೈ, ಜನಪ್ರತಿನಿಧಿ ಹಮೀದ್ ಪಳ್ಳತ್ತಡ್ಕ, ವಿವಿಧ ಪಕ್ಷದ ನಾಯಕರಾದ ಪಿ.ಜಿ. ಜಗನ್ನಾಥ ರೈ, ಬದ್ರುದ್ದಿನ್ ಮಾಸ್ತರ್, ಜೀವನ್ ಥೋಮಸ್, ನಿರಂಜನ್ ರೈ ಪೆರಡಾಲ, ಸತ್ತಾರ್ ಉಪಸ್ಥಿತರಿದ್ದರು.

