ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ 2021-22ನೇ ಆರ್ಥಿಕ ವರ್ಷದ ಕಾರ್ಮಿಕ ಹಾಗೂ ಯೋಜನೆ ರೂಪೀಕರಣದ ಅಂಗವಾಗಿ ಆಯೋಜಿಸಲ್ಪಟ್ಟ ಗ್ರಾಮ ಸಭೆಗಳು 17 ವಾರ್ಡ್ ಗಳಲ್ಲೂ ಯಶಸ್ಬಿಯಾಗಿ ನಡೆದು ಸಂಪನ್ನಗೊಂಡಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌಧಾಭಿ ಹನೀಫ್ ವಿವಿಧೆಡೆಯ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದರು. ಗ್ರಾಮ ಸಭೆಯಲ್ಲಿ ಉದ್ಯೋಗ ಖಾತರಿ ಯೋಜನೆಗೊಳಪಡಿಸಿ ಗ್ರಾಮಾಭಿವೃದ್ಧಿಯ ಪದ್ಧತಿಗಳನ್ನು ರೂಪೀಕರಿಸಲು ತೀರ್ಮಾನಿಸಲಾಗಿದೆ. ಎಲ್ಲಾ ವಾರ್ಡ್ ಸದಸ್ಯರು, ಆರೋಗ್ಯ, ಅಂಗನವಾಡಿ ಕಾರ್ಯಕರ್ತರು, ವಕಿರ್ಂಗ್ ಗ್ರೂಫ್ ಸದಸ್ಯರು ವಿವಿಧ ಗ್ರಾಮ ಸಭೆಗಳಲ್ಲಿ ಪಾಲ್ಗೊಂಡಿದ್ದರು.

