ತಿರುವನಂತಪುರ: ಸಾರ್ವಜನಿಕ ರಸ್ತೆಗಳಲ್ಲಿ ಶಬ್ದ ಮಾಲಿನ್ಯ ಉಂಟುಮಾಡುವ ರೀತಿಯಲ್ಲಿ ಹಾರ್ನ್ ಬಳಸುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಮೋಟಾರು ವಾಹನ ಇಲಾಖೆ ಸಜ್ಜಾಗಿದೆ. ಇದರ ಭಾಗವಾಗಿ ಆಪರೇಷನ್ ಡೆಸಿಬಲ್ ನ್ನು ಬಲಪಡಿಸಲಾಗುತ್ತಿದೆ ಎಂದು ಎಂವಿಡಿ ತಿಳಿಸಿದೆ.
ಹಾರ್ನ್ ನಿರ್ಬಂಧಿತ ಪ್ರದೇಶಗಳಲ್ಲಿ ಅನಗತ್ಯ ಹಾರ್ನ್ ಶಬ್ದ, ಉಲ್ಲಂಘಿಸುವ ಹಾರ್ನ್ ಹಾಗೂ ಸೈಲೆನ್ಸರ್ ಗಳನ್ನು ಪತ್ತೆ ಹಚ್ಚಿ ಶಬ್ದ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವುದಾಗಿ ಮೋಟಾರು ವಾಹನ ಇಲಾಖೆ ತಿಳಿಸಿದೆ. ಎಂವಿಡಿ(ಮೋಟಾರ್ ವೆಹಿಕಲ್ ಡಿಪಾರ್ಟ್ ಮೆಂಟ್)ಯು ಇದನ್ನು ಡೆಸಿಬಲ್ ಮಾಪನದ ಮಾನದಂಡದಡಿ ಆಪರೇಷನ್ ಡೆಸಿಬಲ್ ಹೊಂದಿದೆ ಎಂದು ತಿಳಿಸಲಾಗಿದೆ. ಪದೇ ಪದೇ ಹಾರ್ನ್ ಬಳಕೆ ಮಾಡುವುದರಿಂದ ಶಿಶುವಿನಿಂದ ಹಿಡಿದು ಹಿರಿಯರ ವರೆಗೂ ಆರೋಗ್ಯ ಸಮಸ್ಯೆಗಳು ಕಿರಿಕಿರಿಗಿಂತ ಹೆಚ್ಚಾಗಿ ಕಾಡುತ್ತವೆ. ಈ ಹಿನ್ನೆಲೆಯಲ್ಲಿ ಎಂವಿಡಿ ಕಾನೂನು ಕ್ರಮವನ್ನು ಬಿಗಿಗೊಳಿಸಲು ನಿರ್ಧರಿಸಿದೆ.
ನಿರ್ಧಾರದ ಭಾಗವಾಗಿ, ಆರಂಭಿಕ ಹಂತದಲ್ಲಿ ಪ್ರಮುಖ ನಗರಗಳಲ್ಲಿ ತಪಾಸಣೆಯನ್ನು ಪ್ರಾರಂಭಿಸಲಾಗಿದೆ. ಟ್ರಾಫಿಕ್ ಸಿಗ್ನಲ್‍ಗಳು, ಟ್ರಾಫಿಕ್ ಬ್ಲಾಕ್‍ಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ನ್ಯಾಯಾಲಯದ ಆವರಣಗಳಲ್ಲಿ ಶಬ್ದ ಮಾಲಿನ್ಯವನ್ನು ತಡೆಯಲು ಎಂವಿಡಿ ನಿರ್ಧರಿಸಿದೆ. 70 ಡೆಸಿಬಲ್‍ಗಿಂತ ಹೆಚ್ಚಿನ ಶಬ್ದವು ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ. ಇದರ ಜೊತೆಗೆ, 120 ಡೆಸಿಬಲ್‍ಗಳಿಗಿಂತ ಹೆಚ್ಚಿನ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಕಿವಿಯಲ್ಲಿ ಸಂಪೂರ್ಣ ಶ್ರವಣ ನಷ್ಟಕ್ಕೆ ಕಾರಣವಾಗಬಹುದು ಎಂದು ಎಂವಿಡಿ ಬೊಟ್ಟುಮಾಡಿದೆ.
ಈ ನಿರ್ಧಾರದ ಕುರಿತು ಎಂವಿಡಿಯ ಫೇಸ್ ಬುಕ್ ಪೋಸ್ಟ್ ನ ಪೂರ್ಣ ಆವೃತ್ತಿ:
ಬ್ರೇಕ್‍ಗಿಂತ ಹಾರ್ನ್ ಜೋರಾಗಿ ಸದ್ದು ಮಾಡುತ್ತದೆ ಎಂದು ನಮ್ಮಲ್ಲಿ ಕೆಲವರು ಭಾವಿಸುತ್ತಾರೆ. ರಸ್ತೆಯಲ್ಲಿ ಹೆಚ್ಚು ಸಮಯ ಕಳೆಯುವ ಬಸ್ ಆಟೋ ಚಾಲಕರಲ್ಲಿ ಶೇಕಡ ಅರವತ್ತು ಶೇ. ಜನರಿಗೆ ಶ್ರವಣದೋಷವಿದೆ ಎಂದು ಐಎಂಎ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿದೆ, ಇದು ಹಾರ್ನ್ ನ್ನು ಭೀಕರವಾಗಿ ಮೊಳಗಿಸದಿದ್ದರೆ ನಿಯಂತ್ರಿಸಲು ಸಾಧ್ಯ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಯನ್ನು ಹೊರತುಪಡಿಸಿ ಹಾರ್ನ್ ನ್ನು ಅಶ್ಲೀಲವೆಂದು ಪರಿಗಣಿಸಲಾಗುತ್ತದೆ ಮತ್ತು ಭಾರತದಲ್ಲಿ ಇದಕ್ಕೆ ವಿರುದ್ಧವಾಗಿ, ಇತರ ವಾಹನಗಳ ಚಾಲಕರನ್ನು ಶಿಸ್ತುಬದ್ಧಗೊಳಿಸುವುದಕ್ಕೆ ಸಮಾನವಾಗಿದೆ ಎಂದು ಹಲವರು ಪರಿಗಣಿಸುತ್ತಾರೆ.
ಆಗಾಗ್ಗೆ ಹಾರ್ನ್ ಬಳಕೆ ಶಬ್ದ ಮಾಲಿನ್ಯದ ಪ್ರಮುಖ ಮೂಲವಾಗಿದೆ. ಇದು ಕೇವಲ ಒಂದು ಉಪದ್ರವಕ್ಕಿಂತ ಹೆಚ್ಚಿನದಾಗಿದೆ, ಇದು ಶಿಶುಗಳು ಮತ್ತು ವಯಸ್ಕರ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ಶಬ್ಧ ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಮೋಟಾರು ವಾಹನ ಇಲಾಖೆ ಆಪರೇಷನ್ ಡೆಸಿಬಲ್ ಜಾರಿಗೊಳಿಸುತ್ತಿದೆ. ಆಪರೇಷನ್ ಡೆಸಿಬಲ್ ಅನಗತ್ಯ ಹಾರ್ನ್ ಶಬ್ದಗಳು, ಹಾರ್ನ್-ನಿಬರ್ಂಧಿತ ಪ್ರದೇಶಗಳಲ್ಲಿ ಹಾರ್ನ್ ಬಳಸುವಿಕೆ ಕಂಡುಬರುತ್ತಿದ್ದು, ಸೈಲೆನ್ಸರ್‍ಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಮತ್ತು ವಾಹನ ಬಳಕೆದಾರರಲ್ಲಿ ಶಬ್ದ ಮಾಲಿನ್ಯದ ವಿರುದ್ಧ ಜಾಗೃತಿ ಮೂಡಿಸಲು ಉದ್ದೇಶಿಸಲಾಗಿದೆ.




