ಕೊಚ್ಚಿ: ಚಿತ್ರ ನಿರ್ದೇಶಕ ಅಲಿ ಅಕ್ಬರ್ ಇಸ್ಲಾಂ ಧರ್ಮ ತೊರೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮಿಲಿಟರಿಯಲ್ಲಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಮೃತರಾದಾಗ ಎಮೋಜಿ ಹಾಕುವ ಸಂಸ್ಕೃತಿಯೊಂದಿಗೆ ಇನ್ನು ಇರಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ ಮತ್ತು ಅವರು ಹುಟ್ಟಿದ ಇಸ್ಲಾಂನ ನಿಲುವಂಗಿಯನ್ನು ತ್ಯಜಿಸುತ್ತಿದ್ದಾರೆ ಎಂದಿರುವರು. ಇನ್ನು ಮುಂದೆ ಅವರು ಮತ್ತು ಅವರ ಕುಟುಂಬ ಭಾರತೀಯರಾಗುತ್ತಾರೆ. ಇದಕ್ಕಾಗಿ ತನ್ನ ತಲೆತಂಡವಾಗಬಹುದು. ಯಾವುದೇ ಸಮಸ್ಯೆ ಎದುರಿಸಲು ಸಿದ್ಧ ಮತ್ತು ಇದು ದೃಢ ನಿರ್ಧಾರ ಎಂದು ಅಲಿ ಅಕ್ಬರ್ ನಿನ್ನೆ ತಿಳಿಸಿದ್ದಾರೆ.
ಮಲಪ್ಪುರಂ ರಾಜ್ಯದ ರಾಜಧಾನಿ ಎಂದು ನಾಳೆ ಹೇಳಿದರೆ ಅದನ್ನೂ ಪಾಲಿಸಬೇಕಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಈಗ ಅವರು ಧರ್ಮದೊಂದಿಗೆ ಮುಂದುವರಿಯಲು ನಿರ್ಧರಿಸಿದ್ದಾರೆ. ಹುಟ್ಟಿದಾಗ ಸಿಕ್ಕಿದ್ದ ಉಡುಪನ್ನು ಇಂದು ಬಿಸಾಡುತ್ತಿದ್ದೇನೆ. ಭಾರತದ ವಿರುದ್ಧ ಸಾವಿರಾರು ನಗುವ ಎಮೋಜಿಗಳನ್ನು ಹೊಂದಿರುವ ಕಿಡಿಗೇಡಿಗಳಿಗೆ ಇದು ನನ್ನ ಉತ್ತರ. ಇಂದಿನಿಂದ ನಾನು ಮುಸಲ್ಮಾನನಲ್ಲ. ನಾನು ಭಾರತೀಯ. ನನ್ನ ಕುಟುಂಬ ಮತ್ತು ನಾನು ಇಸ್ಲಾಂ ಧರ್ಮವನ್ನು ತೊರೆಯುತ್ತಿದ್ದೇವೆ. ನಾವು ಒಟ್ಟಾಗಿ ಆ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾನು ಈ ಎಮೋಜಿಗಳನ್ನು ಹಾಕಿದಾಗ, ನಾನು ಅದಕ್ಕೆ ಪ್ರತಿಕ್ರಿಯಿಸದ ಮುಸ್ಲಿಂ ಧರ್ಮವನ್ನು ತ್ಯಜಿಸುತ್ತಿದ್ದೇನೆ. ಇದು ತುಂಬಾ ದುಃಖಕರವಾಗಿದೆ ಎಂದಿರುವರು.
ಭಗವಾನ್ ಶ್ರೀಕೃಷ್ಣನೆಂದಂತೆ ಯಾವ ಕುಲದಲ್ಲಿ ನಾವು ವಾಸಿಸುತ್ತಿದ್ದೇವೋ ಆ ಕುಲದ ಧರ್ಮವನ್ನು ಪಾಲಿಸಬೇಕು. ಕೃಷ್ಣನ ಆ ಒಂದು ಸಲಹೆಯಿಂದಲೇ ನಾನು ಇಷ್ಟು ದಿನ ತಾಳ್ಮೆಯಿಂದಿದ್ದೆ. ಆದರೆ ಇನ್ನು ನನ್ನಿಂದ ಸಾಧ್ಯವಿಲ್ಲ. ಈಗ ನಾವು ಧರ್ಮದ ಮಾರ್ಗವನ್ನು ಅನುಸರಿಸುತ್ತೇವೆ. ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ನನ್ನ ಹೆಂಡತಿ ಮತ್ತು ನಾನು 24 ಗಂಟೆಗಳ ಕಾಲ ಮಾತನಾಡಿದೆವು. ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವವರು ಮೃತರಾದಾಗ ನಗುವ ಇಮೋಜಿಗಳನ್ನು ಹಾಕುವ ಸಂಸ್ಕೃತಿಯೊಂದಿಗೆ ನಿಲ್ಲಲು ಇನ್ನು ಸಾಧ್ಯವಿಲ್ಲ. ತಾವಿನ್ನು ಆ ಸಂಸ್ಕೃತಿಯೊಂದಿಗೆ ಇಲ್ಲ. ನಾಳೆ ಯಾವುದೇ ಕಾಂಗ್ರೆಸ್ ಶಾಸಕರು ನನ್ನ ತಲೆ ತಂಡಕ್ಕೆ ಪ್ರಯತ್ನಿಸಬಹುದು. ಆದರೆ ಪರವಾಗಿಲ್ಲ. ನನ್ನೊಂದಿಗೆ ಯಾರಿರುತ್ತಾರೆ ಎಂದು ನನಗೆ ತಿಳಿದಿದೆ. ಇದು ದೃಢ ನಿರ್ಧಾರ ಎಂದು ಅಲಿ ಅಕ್ಬರ್ ಹೇಳಿದ್ದಾರೆ.




