ಆಲಪ್ಪುಳ: ಹಕ್ಕಿ ಜ್ವರ ದೃಢಪಟ್ಟರೆ ಬಾತುಕೋಳಿಗಳನ್ನು ಸಾಮೂಹಿಕ ಹತ್ಯೆಗೈಯ್ಯಲು ಕುಟ್ಟನಾಡ್ ನ ತಕಳಿ ಪಂಚಾಯತ್‍ನಲ್ಲಿ ವಿಶೇಷ ಸಮಿತಿಯನ್ನು ನೇಮಿಸಲಾಗಿದೆ. ಮೊನ್ನೆ ತಕಳಿ, ನೆಡುಮುಡಿ, ಪುರಕ್ಕಾಡ್ ಪಂಚಾಯತ್ ವ್ಯಾಪ್ತಿಯಲ್ಲಿ ಸಾವಿರಾರು ಬಾತುಕೋಳಿಗಳು ಈ ರೋಗಕ್ಕೆ ಬಲಿಯಾಗಿವೆ. ತಡವಾದ ಪರೀಕ್ಷೆಯ ಫಲಿತಾಂಶಗಳು ರೋಗದ ಹರಡುವಿಕೆಯನ್ನು ಹೆಚ್ಚಿಸಿವೆ. ಇದರೊಂದಿಗೆ ಕ್ರಿಸ್ ಮಸ್ ಮಾರುಕಟ್ಟೆಯನ್ನೇ ಗುರಿಯಾಗಿಸಿಕೊಂಡು ರೈತರ ಸಿದ್ದತೆಗಳು ಚಿಂತಾಜನಕವಾಗಿದೆ.
ಕುಟ್ಟನಾಡ್‍ನಲ್ಲಿ ಹಕ್ಕಿ ಜ್ವರ ದೃಢಪಟ್ಟಿದ್ದಲ್ಲಿ 11 ಪಂಚಾಯತ್‍ಗಳಲ್ಲಿ ಬಾತುಕೋಳಿಗಳು ಮತ್ತು ಇತರ ದೇಶೀಯ ಪಕ್ಷಿಗಳ ವರ್ಗಾವಣೆ ಮತ್ತು ಸಾಗಣೆಯನ್ನು ನಿಷೇಧಿಸಲಾಗುವುದೆ. ವಾರಗಳ ಹಿಂದೆ, ಕುಟ್ಟನಾಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಬಾತುಕೋಳಿಗಳು ಸಾಯಲಾರಂಭಿಸಿದವು. ಆದರೆ ಈ ರೋಗಕ್ಕೆ ಎಚ್5ಎನ್1 ವೈರಸ್ ಕಾರಣ ಎಂದು ದೃಢಪಡಿಸಲು ತಡವಾಗಿತ್ತು. ಮಾದರಿಗಳನ್ನು ಪರೀಕ್ಷೆಗಾಗಿ ಭೋಪಾಲ್‍ಗೆ ಕಳುಹಿಸಲಾಗಿದೆ. ಆದರೆ ಫಲಿತಾಂಶ ಬರುವ ವೇಳೆಗೆ ನೂರಾರು ಬಾತುಕೋಳಿಗಳು ಸಾವನ್ನಪ್ಪಿದ್ದವು.
ನೆಡುಮುಡಿ ಪಂಚಾಯಿತಿಯೊಂದರಲ್ಲೇ 8 ಸಾವಿರಕ್ಕೂ ಹೆಚ್ಚು ಬಾತುಕೋಳಿಗಳು ಸಾವನ್ನಪ್ಪಿವೆ. ಬಿಕ್ಕಟ್ಟಿನಿಂದ ಮೂವರು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ಬಾತುಕೋಳಿಗಳ ಹತ್ಯೆಗೆ ಸಮಿತಿ ನೇಮಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಐದು ವರ್ಷಗಳ ಹಿಂದೆ ಆಲಪ್ಪುಳದಲ್ಲಿ ಹಕ್ಕಿಜ್ವರಕ್ಕೆ ತುತ್ತಾಗಿ ಬಾತುಕೋಳಿಗಳ ಹಿಂಡು ಸಾವನ್ನಪ್ಪಿದ್ದವು. 2014 ಮತ್ತು 2016ರಲ್ಲಿ ಸಾವಿರಾರು ಬಾತುಕೋಳಿಗಳು ಸಾವನ್ನಪ್ಪಿವೆ. ಈ ವರ್ಷದ ಜನವರಿಯಲ್ಲಿ ಹಕ್ಕಿ ಜ್ವರ ಮತ್ತು ಮೇ ತಿಂಗಳಲ್ಲಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಾತುಕೋಳಿಗಳು ಸಾವನ್ನಪ್ಪಿವೆ. ಬರ್ಡ್ ಫ್ಲೂ ಗಾಳಿಯಿಂದ ಹರಡುವ ರೋಗ. ಇದು ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ.




