ಕಾಸರಗೋಡು: ಸಹಕಾರ ಭಾರತಿಯ ಜಿಲ್ಲಾ ಮಾಜಿ ಅಧ್ಯಕ್ಷ, ಕಾಸರಗೋಡು ಕೋಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಗಣಪತಿ ಕೋಟೆಕಣಿ(75) ನಿನ್ನೆ ರಾತ್ರಿ ಕಾಸರಗೋಡಿನ ಖಾಸಗೀ ಆಸ್ಪತ್ರೆಯಲ್ಲಿ ನಿಧನರಾದರು. ರಾಜಕೀಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ರಂಗದಲ್ಲಿ ಸಕ್ರಯರಾಗಿದ್ದರು. ಕಾಸರಗೋಡು ನಗರಸಭೆಯ ಮಾಜಿ ಸದಸ್ಯರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.




