ಕಾಸರಗೋಡು: ತಮಿಳ್ನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಧೀರ ಯೋಧರಿಗೆ ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಶ್ರದ್ಧಾಂಜಲಿ ಕಾಸರಗೋಡು ಕರಂದಕ್ಕಾಡಿನಲ್ಲಿ ಜರುಗಿತು. ಕರಂದಕ್ಕಾಡ್ ಜಂಕ್ಷನ್‍ನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ಸ್ಮøತಿಮಂಟಪದಲ್ಲಿಪುಷ್ಪಾರ್ಚನೆ ನಡೆಸುವುದರ ಜತೆಗೆ ಮಡಿದ ಯೋಧರಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ ಮಧೂರ್ ಪುಷ್ಪಾರ್ಚನೆ ನಡೆಸಿ ಮಾತನಾಡಿ, ಮೂರೂ ಪಡೆಗಳ ಮಹಾದಂಡನಾಯಕ ಬಿಪಿನ್ ರಾವತ್ ಹಾಗೂ ಅವರ ಅಧೀನ ಅಧಿಕಾರಿಗಳ ಸೇವೆ ಪ್ರತಿ ಭಾರತೀಯನಿಗೆ ಸದಾ ಸ್ಮರಣೀಯವಾಗಿರುತ್ತದೆ ಎಂಬುದಾಗಿ ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಜಿತೇಶ್ ಎನ್, ರಾಜ್ಯ ವನಿತಾ ಕನ್ವೀನರ್ ಅಂಜು ಜೋಸ್ಟಿ, ಕಸರಗೋಡು ಮಂಡಲ ಸಮಿತಿ ಕಾರ್ಯಾಧ್ಯಕ್ಷ ಅಜಿತ್‍ಕುಮಾರನ್, ಅಶೋಕನ್ ಸೂರ್ಲು ಉಪಸ್ಥಿತರಿದ್ದರು.

