HEALTH TIPS

ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ವರ್ಷಾವಧಿ ಷಷ್ಠಿ ಉತ್ಸವ ಸಂಪನ್ನ

       ಮುಳ್ಳೇರಿಯ: ಮುಳಿಯಾರು ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರದಲ್ಲಿ ವರ್ಷಾವಧಿ ಷಷ್ಠಿ ಉತ್ಸವವು ಸಂಪನ್ನವಾಯಿತು. ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಯಿತು. ಅರವತ್ ಪದ್ಮನಾಭ ತಂತ್ರಿ ಅವರಿಂದ ವಿವಿಧ ಧಾರ್ಮಿಕ ಕಾರ್ಯಗಳು  ಜರಗಿದವು. ಬಳಿಕ ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ,  ಸಾಂಗವಾಗಿ ನೆರವೇರಿದವು.


            ಗುರುವಾರ  ಬೆಳಗ್ಗೆ ಗಣಹೋಮ, ನವಕಾಭಿಷೇಕ , ತುಲಾಭಾರಸೇವೆ , ಮಧ್ಯಾಹ್ನ ಪೂಜೆ, ಶ್ರೀಭೂತಬಲಿ ಮತ್ತು  ಶುಕ್ರವಾರ ಉಷಃಪೂಜೆ, ಶಿವೇಲಿ, ಪೂಜೆ, ಮಂತ್ರಾಕ್ಷತೆ, ಅನ್ನಪ್ರಸಾದ, ವಿಷ್ಣುಮುರ್ತಿ ದೈವದ ಕೋಲ, ರಾತ್ರಿ ಶ್ರೀರಂಗಪೂಜೆ ಕಾರ್ಯಕ್ರಮಗಳು ಜರಗಿದವು.  ಪ್ರಧಾನ ಅರ್ಚಕ ಅನಂತಪದ್ಮನಾಭ ಮಯ್ಯ ಅವರು ಪೂಜಾದಿ ವೈದಿಕ ಕಾರ್ಯಗಳನ್ನು ನೆರವೇರಿಸಿದರು. ಸೀತಾರಾಮ ಬಳ್ಳುಳ್ಳಾಯ ಸಮಾರಂಭ ನಿರ್ವಹಣೆ ಮಾಡಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries