ತಿರುವನಂತಪುರ: ಮಲಯಾಳಂ ಚಲನಚಿತ್ರದಲ್ಲಿ ಜೀವಮಾನದ ಸಾಧನೆಗಾಗಿ 2020ರ ಜೆಸಿ ಡೇನಿಯಲ್ ಪ್ರಶಸ್ತಿಗೆ ಗಾಯಕ ಪಿ.ಜಯಚಂದ್ರನ್ ಅವರನ್ನು ಆಯ್ಕೆ ಮಾಡಲಾಗಿದೆ. ಇದು ರಾಜ್ಯ ಸರ್ಕಾರದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾಗಿದೆ. ಜೆ.ಸಿ.ಡೇನಿಯಲ್ ಪ್ರಶಸ್ತಿಯು ರೂ.5 ಲಕ್ಷ ನಗದು, ಪ್ರಮಾಣ ಪತ್ರ ಹಾಗೂ ಗೌರವ ಫಲಕ ಒಳಗೊಂಡಿದೆ. ಡಿ.23ರಂದು ದರ್ಬಾರ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
50 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿರುವ ಪಿ.ಜಯಚಂದ್ರನ್ ಅವರು ಮಲಯಾಳಂ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಗಾಯಕರಾಗಿದ್ದಾರೆ ಎಂದು ತೀರ್ಪುಗಾರರು ಹೇಳಿರುವರು. ಅಡೂರ್ ಗೋಪಾಲಕೃಷ್ಣನ್, ನಟ, ಚಿತ್ರಕಥೆಗಾರ ಮತ್ತು ನಿರ್ದೇಶಕ ರಂಜಿ ಪಣಿಕ್ಕರ್, ನಟಿ ಸೀಮಾ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಕಮಲ್ ಮತ್ತು ಸಾಂಸ್ಕøತಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಣಿ ಜಾರ್ಜ್ ಐಎಎಸ್ ಅವರನ್ನು ಒಳಗೊಂಡ ಸಮಿತಿಯು ಪಿ ಜಯಚಂದ್ರನ್ ಅವರನ್ನು ಆಯ್ಕೆ ಮಾಡಿದೆ.
1965ರ ಕುಂಜಾಲಿ ಮರಕ್ಕಾರ್ ಚಿತ್ರಕ್ಕೆ ಜಯಚಂದ್ರನ್ ಮೊದಲು ಹಾಡಿದ್ದರೂ, ಕಲಿತೊಲ್ ಎಂಬ ಚಿತ್ರಕ್ಕೆ ಹಾಡಿದ 'ಮಂಜಲಾಯಿಲ್ ಮುಂಗಿತೋರ್ತಿ.. ಧನು ಮಾಸ ಚಂದ್ರಿಕಾ ವನ್ನು' ಎಂದು ಆರಂಭವಾಗುವ ಮೊದಲ ಹಾಡು ಬಿಡುಗಡೆಯಾಗಿದೆ. ಅವರು ಮಲಯಾಳಂ, ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ.




