ತಿರುವನಂತಪುರ: ಪಿಜಿ ವೈದ್ಯರ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಂಬಲ ವ್ಯಕ್ತಪಡಿಸಿದೆ. ಮುಷ್ಕರದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಐಎಂಎ ಆಗ್ರಹಿಸಿದೆ. ಮುಷ್ಕರದ ಬಗ್ಗೆ ಸರ್ಕಾರ ನಿರಾಸಕ್ತಿ ತಾಳಿವೆ ಎಂದು ರಾಷ್ಟ್ರೀಯ ಅಧ್ಯಕ್ಷ ಡಾ. ಜೆಎ ಜಯಲಾಲ್ ಹೇಳಿರುವರು.
ಕೊರೋನಾ ಅವಧಿಯ ಕಾರಣ ವೈದ್ಯರಿಗೆ ಹೆಚ್ಚುವರಿ ಕೆಲಸದ ಹೊರೆ ಇದೆ. ಪಿ.ಜಿ. ದಾಖಲಾತಿಯನ್ನು ತ್ವರಿತಗೊಳಿಸಬೇಕು ಅಥವಾ ಬದಲಿಗೆ ವೈದ್ಯರನ್ನು ನೇಮಿಸಬೇಕು. ಇವರಿಗೆ ನೀಡುತ್ತಿರುವ ಸ್ಟೈಫಂಡ್ ಹೆಚ್ಚಿಸುವಂತೆಯೂ ಐಎಂಎ ಆಗ್ರಹಿಸಿದೆ. ನಿರ್ಧಾರ ತಡವಾದರೆ ಐಎಂಎ ಕೂಡ ಮುಷ್ಕರ ನಡೆಸಲಿದೆ ಎಂದು ಸೂಚನೆ ನೀಡಿದೆ.
ಇದೇ ವೇಳೆ ನಿನ್ನೆ ಪಿಜಿ ವೈದ್ಯರು ಮಾತ್ರವಲ್ಲದೆ ಹೌಸ್ ಸರ್ಜನ್ ಗಳು ಕೂಡ ಮುಷ್ಕರ ನಡೆಸುತ್ತಿರುವುದರಿಂದ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ರೋಗಿಗಳು ಪರದಾಡುವಂತಾಗಿದೆ. ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಯಿತು. ಒಪಿ ವಿಫಲವಾಗುವುದನ್ನು ತಡೆಯಲು ಆರೋಗ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇಂದು ಪಿಜಿ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಚರ್ಚೆ ನಡೆಸಲಿದ್ದಾರೆ.




