HEALTH TIPS

DRDO: 'ಪ್ರಳಯ್' ಕ್ಷಿಪಣಿಯ ಮೊದಲ ಯಶಸ್ವಿ ಪರೀಕ್ಷೆ ನಂತರ ಎರಡನೇ ಪರೀಕ್ಷಾರ್ಥ ಹಾರಾಟ ಕೂಡ ಯಶಸ್ವಿ!

           ಭುವನೇಶ್ವರ: ಪ್ರಳಯ್ (Pralay) ಮೊದಲ ಪರೀಕ್ಷಾರ್ಥ ಉಡಾವಣಾ ಪ್ರಯೋಗ ಯಶಸ್ವಿಯಾದ ನಂತರ, ಭಾರತವು ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಮೇಲ್ಮೈಯಿಂದ ಮೇಲ್ಮೈಗೆ (Surface to Surface air) ಕಡಿಮೆ ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿ (Ballistic missile) ಪ್ರಳಯ್ ನ್ನು ಇಂದು ಗುರುವಾರ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ದ್ವಿತೀಯಪರೀಕ್ಷಾರ್ಥ ಉಡಾವಣೆ ನಡೆಸಿತು.

         ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಸತತ ಎರಡು ದಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಎರಡು ಯಶಸ್ವಿ ಪರೀಕ್ಷಾ ಉಡಾವಣೆಯನ್ನು ಕೈಗೊಳ್ಳಲಾಗಿದೆ. ಶಸ್ತ್ರಾಸ್ತ್ರ ವ್ಯವಸ್ಥೆಯ ನಿಖರತೆ ಮತ್ತು ಮಾರಕತೆಯನ್ನು ಸಾಬೀತುಪಡಿಸಲು ಕ್ಷಿಪಣಿಯನ್ನು ಭಾರವಾದ ಪೇಲೋಡ್ (Payload) ಮತ್ತು ವಿಭಿನ್ನ ಶ್ರೇಣಿಗಾಗಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು ಎಂದು ರಕ್ಷಣಾ ಇಲಾಖೆ ಮೂಲಗಳು ತಿಳಿಸಿವೆ.

           ಇಂದು ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿ ಟೇಕ್ ಆಫ್ ಆದ ನಂತರ ನಿನ್ನೆ ನಡೆಸಲಾದ ಕ್ಷಿಪಣಿಯು ಮೊದಲ ಪ್ರಯೋಗಕ್ಕೆ ಹೋಲಿಸಿದರೆ ಇಂದಿನ ಪರೀಕ್ಷಾರ್ಥ ಉಡಾವಣೆ ವಿಭಿನ್ನ ಸಂರಚನೆಯೊಂದಿಗೆ ಮತ್ತು ಹೆಚ್ಚಿನ ಪೇಲೋಡ್ ನ್ನು ಹೊತ್ತುಕೊಂಡು ಹಾರಾಟದ ಉದ್ದೇಶಗಳನ್ನು ಪೂರೈಸುವ ವಿಭಿನ್ನ ಪಥದಲ್ಲಿ ಪ್ರಯಾಣಿಸಿತು ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿದರು.

         ಪ್ರಳಯ್ ಕ್ಷಿಪಣಿಯ ಹಾರಾಟ ಪರೀಕ್ಷೆಯು ಯಶಸ್ವಿಯಾಗಿದೆ. ಇದು ಕ್ಷಿಪಣಿಯ ಎರಡೂ ಸಂರಚನೆಗಳಲ್ಲಿ ವ್ಯವಸ್ಥೆಯನ್ನು ಸಾಬೀತುಪಡಿಸಿತು. ಈ ಉಡಾವಣೆಯನ್ನು ಪೂರ್ವ ಕರಾವಳಿಯಾದ್ಯಂತ ನಿಯೋಜಿಸಲಾದ ಟೆಲಿಮೆಟ್ರಿ, ರಾಡಾರ್ ಮತ್ತು ಎಲೆಕ್ಟ್ರೋ-ಆಪ್ಟಿಕ್ ಟ್ರ್ಯಾಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಶ್ರೇಣಿಯ ಸಂವೇದಕಗಳು, ಉಪಕರಣಗಳು, ಡೌನ್ ರೇಂಜ್ ಹಡಗುಗಳು ಮೇಲ್ವಿಚಾರಣೆ ಮಾಡುತ್ತವೆ.

               ಪ್ರಳಯ್ ಬ್ಯಾಲಿಸ್ಟಿಕ್ ಕ್ಷಿಪಣಿಯ ವಿಶೇಷತೆಗಳು: ಈ ಬ್ಯಾಲಿಸ್ಟಿಕ್ ಕ್ಷಿಪಣಿ ಸುಮಾರು ಐದು ಟನ್ ತೂಕದ ತೂಕ ಹೊಂದಿದ್ದು, 1000 ಕೆಜಿ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲದು. 500 ಕಿಲೋ ಮೀಟರ್ ವರೆಗೆ ಗುರಿಯನ್ನಿರಿಸಿ ಹೊಡೆಯುತ್ತದೆ. ಪೃಥ್ವಿ ಡಿಫೆನ್ಸ್ ವೆಹಿಕಲ್ (ಪಿಡಿವಿ) ಎಕ್ಸೋ-ಅಟ್ಮಾಸ್ಫಿಯರಿಕ್ ಇಂಟರ್‌ಸೆಪ್ಟರ್‌ನ ವ್ಯುತ್ಪನ್ನ, ಕುಶಲ ಶಸ್ತ್ರಾಸ್ತ್ರ ವ್ಯವಸ್ಥೆಯು ಶತ್ರುಗಳನ್ನು ನಾಶಪಡಿಸಬಹುದಾಗಿದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಪ್ರತಿಬಂಧಕಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ. 

         ಪ್ರಳಯ ಈ ಯಶಸ್ವಿ ಹಾರಾಟ ಪರೀಕ್ಷೆಯೊಂದಿಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ದೇಶವು ಬಲಿಷ್ಠ ವಿನ್ಯಾಸ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೊಂದಿದೆ ಎಂಬುದನ್ನು ಸಾಬೀತುಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಡಿಆರ್ ಡಿಒ (DRDO) ಮತ್ತು ಸಹವರ್ತಿ ತಂಡಗಳನ್ನು ಈ ಯಶಸ್ವಿ ಪರೀಕ್ಷಾರ್ಥ ಹಾರಟಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. 



    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries