HEALTH TIPS

ದೆಹಲಿ ಹುಡುಗಿಗೆ 'SEX' ಅಕ್ಷರ ಒಳಗೊಂಡ ನೋಂದಣಿ ಸಂಖ್ಯೆ ನೀಡಿದ ಸಾರಿಗೆ ಇಲಾಖೆಗೆ ಡಿಸಿಡಬ್ಲ್ಯೂ ನೋಟಿಸ್

                  ನವದೆಹಲಿ : 'SEX' ಎಂಬ ಅಕ್ಷರಗಳನ್ನು ಒಳಗೊಂಡಿರುವ ಬಾಲಕಿಯರ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆಯನ್ನು ಬದಲಾಯಿಸುವಂತೆ ಕೋರಿ ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯು) ಸಾರಿಗೆ ಇಲಾಖೆಗೆ ಶನಿವಾರ ನೋಟಿಸ್ ಜಾರಿ ಮಾಡಿದೆ.

                 ನೋಟಿಸ್ ಗೆ ಪ್ರತಿಕ್ರಿಯೆ ಸಲ್ಲಿಸುವಾಗ ಈ ಹೊಸ ಸರಣಿಯಡಿ ನೋಂದಣಿಯಾಗಿರುವ ಒಟ್ಟು ವಾಹನಗಳ ಸಂಖ್ಯೆಯನ್ನು ನಮೂದಿಸುವಂತೆ ಡಿಸಿಡಬ್ಲ್ಯು ಸಾರಿಗೆ ಇಲಾಖೆಗೆ ಸೂಚಿಸಿದೆ.

                   ಈ ವಿಚಾರ ಬೆಳಕಿಗೆ ಬಂದ ನಂತರ ಇಡೀ ಸರಣಿಯನ್ನು ನಿಲ್ಲಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

             "ಜನರು ಕ್ಷುಲ್ಲಕರಾಗಿ ಕಿರುಕುಳ ನೀಡುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ, ಬಾಲಕಿಗೆ ಇಷ್ಟೊಂದು ಕಿರುಕುಳ ನೀಡುವುದು ಸರಿಯಲ್ಲ. ಇನ್ನು ಮುಂದೆ ಬಾಲಕಿಗೆ ತೊಂದರೆಯಾಗದಂತೆ ಈ ಸಮಸ್ಯೆಯನ್ನು ಬಗೆಹರಿಸಲು ಸಾರಿಗೆ ಇಲಾಖೆಗೆ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದೇವೆ" ಎಂದು ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

           " 'SEX'" ಪದವನ್ನು ಹೊಂದಿರುವ ಈ ಹಂಚಿಕೆ ಸರಣಿಯಲ್ಲಿ ನೋಂದಾಯಿಸಲಾದ ಒಟ್ಟು ವಾಹನಗಳ ಸಂಖ್ಯೆಯನ್ನು ಸಲ್ಲಿಸಲು ನಾನು ಸಾರಿಗೆ ಇಲಾಖೆಯನ್ನು ಸೂಚಿಸಿದ್ದೇನೆ" ಎಂದು ಅವರು ಹೇಳಿದ್ದಾರೆ.

            ಇತ್ತೀಚಿಗಷ್ಟೇ ಹೊಸ ಸ್ಕೂಟಿ ಖರೀದಿಸಿದ್ದ ದೆಹಲಿ ವಿದ್ಯಾರ್ಥಿನಿಯೊಬ್ಬರಿಗೆ 'SEX' ಅಕ್ಷರಗಳನ್ನು ಒಳಗೊಂಡ ನೋಂದಣಿ ಸಂಖ್ಯೆ ನೀಡಲಾಗಿತ್ತು. ಈ ನೋಂದಣಿ ಸಂಖ್ಯೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಯುವತಿ ಸ್ಕೂಟಿ ಓಡಿಸುವುದನ್ನೇ ಬಿಟ್ಟಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries