ಕಾಸರಗೋಡು: ಕೆರಳ ಸರ್ಕಾರದ ಯೋಜನೆ'ಕೇರಳ ನಾಲೇಜ್ ಮಿಶನ್ ಇಕಾನಮಿ'ಯನ್ವಯ ಬೋವಿಕ್ಕಾನದ ಲಾಲ್‍ಬಹದ್ದೂರ್ ಶಾಸ್ತ್ರಿ(ಎಬಿಎಸ್)ಇಂಜಿನಿಯರಿಂಗ್ ಕಾಲೇಜಿನಲ್ಲಿ ಜ. 11ರಂದು ನಡೆಯಲಿರುವ ಉದ್ಯೋಗಮೇಳದ ಪ್ರಯೋಜನವನ್ನು ಅರ್ಹವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿಯ ಪಿಆರ್‍ಡಿ ಚೇಂಬರ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸುವವರು ಡಿಜಿಟಲ್ ವರ್ಕ್‍ಫೋರ್ಸ್ ಮ್ಯೇನೇಜ್‍ಮೆಂಟ್ ಸಿಸ್ಟಂ(ಡಿಡಬ್ಲ್ಯೂಎಂಎಸ್)ಹೆಸರು ನೋಂದಾಐಇಸಬೇಕಾಗಿದೆ. ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ಉದ್ಯೋಗ ಮೇಳ ನಡೆಯಲಿದೆ. ಐಟಿ, ಇಂಜಿನಿಯರಿಂಗ್, ಟೆಕ್ನಿಕಲ್ ಜೋಬ್ಸ್, ಸಿವಿಲ್ ಏಂಡ್ ಕನ್‍ಸ್ಟ್ರಕ್ಷನ್, ಮೊಬೈಲ್, ಮೆಡಿಕಲ್, ಲಾಜಿಸ್ಟಿಕ್, ಮ್ಯಾನೇಜ್‍ಮೆಂಟ್, ರಿಟೈಲ್, ಫೈನಾನ್ಸ್, ಶಿಕ್ಷಣ ಸಂಸ್ಥೆಗಳು, ಬ್ಯಾಂಕಿಂಗ್, ಮಾರ್ಕೆಟಿಂಗ್, ಸೇಲ್ಸ್, ಮೀಡಿಯ, ಸಕಿಲ್ ಎಜುಕೇಶನ್, ಹಾಸ್ಪಿಟಾಲಿಟಿ, ವಿಮೆ, ಶಿಪ್ಪಿಂಗ್, ಅಡ್ಮಿನಿಸ್ಟ್ರೇಶನ್, ಹೋಟೆಲ್ ಮ್ಯಾನೇಜ್‍ಮೆಂಟ್, ತೆರಿಗೆ ಮುಂತಾದ ವಲಯಗಳಲ್ಲಿನ ನೂರರಷ್ಟು ಕಂಪೆನಿಗಳಲ್ಲಿ 15ಸಾವಿರಕ್ಕೂ ಹೆಚ್ಚು ಹುದ್ದೆಗಳು ಕೇರಳ ರಾಜ್ಯದಲ್ಲಿ ತೆರವಾಗಿರುವ ಬಗ್ಗೆ ರಿಪೋರ್ಟ್ ಮಾಡಲಾಗಿದೆ.
ಕೋವಿಡ್ ಮಾನದಂಡ ಪಾಲಿಸುವುದರೊಂದಿಗೆ ಮುಂಚಿತವಾಗಿ ಹೆಸರು ನೋಂದಾಯಿಸಿದವರಿಗೆ ಮೇಳದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಮಹಾಪ್ರಬಂಧಕ ಕೆ. ಸಜಿತ್‍ಕುಮಾರ್, ಜಿಲ್ಲಾ ವಾರ್ತಾಧಿಕಾರಿ ಎಂ. ಮಧುಸೂಧನ್, ಕೇರಳ ನಾಲೇಜ್ ಮಿಶನ್ ಇಕಾನಮಿ ಜಿಲ್ಲಾ ಪ್ರೋಗ್ರಾಮ್ ಅಧಿಕಾರಿ ಸಿ.ಬಿ ಅಕ್ಬರಲಿ ಉಪಸ್ಥಿತರಿದ್ದರು.

