ಕಾಸರಗೋಡು: ಕರಂದಕ್ಕಾಡು ಬಿಲ್ಲವ ಸೇವಾ ಸಂಘದ 16ನೇ ವಾರ್ಷಿಕೋತ್ಸವ ಕರಂದಕ್ಕಾಡು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರುಗಿತು. ಗುರುಪ್ರಸಾದ್ ಶಾಂತಿ ಅವರ ನೇತೃತ್ವದಲ್ಲಿ ಗಣಹೋಮ ಹಾಗೂ ವಿವಿಧ ವೈದಿಕ ಕಾರ್ಯಕ್ರಮ ಜರುಗಿತು. ಮಹಿಳಾ ಸಮಾಜದಿಂದ ಭಜನಾ ಸಂಕೀರ್ತನೆ, ಗುರುಪೂಜೆ ನಡೆಯಿತು.
ಈ ಸಂದರ್ಭ ನಡೆದ ಸಮಾರಂಭದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಎ.ಕೇಶವ ಅಧ್ಯಕ್ಷತೆ ವಹಿಸಿದ್ದರು. ಪಳ್ಳದಕೊಟ್ಯದ ಸಂಜೀವ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಹಿಳಾ ಸಂಘದ ಅಧ್ಯಕ್ಷೆ ಮಾಲತೀಸುರೇಶ್, ಕಾರ್ಯದರ್ಶಿ ಶಶಿಮಣಿ, ರಘು ಮೀಪುಗುರಿ, ಜಯಶೀಲ ಸುವರ್ಣ, ಸುಕೀರ್ತಿ, ರವಿ. ಮೋಹನ, ಮೈಂದಪ್ಪ, ಜಯಂತ, ಶಮ್ಮಿಕುಮಾರ್ ಉಪಸ್ಥಿತರಿದ್ದರು.

