ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ನೃತ್ಯ ತರಬೇತಿ ಶಿಬಿರ ಜ. 10ರಿಂದ 13ರ ವರೆಗೆ ಚಿನ್ಮಯ ಕಲಾಮಂದಿರದ ಆಶ್ರಯದಲ್ಲಿ ಜನವರಿ 10ರಿಂದ 13ರ ತನಕ ಜರುಗಲಿದೆ. ದೂರದರ್ಶನದ ಬಿ ಗ್ರೇಡ್ ನೃತ್ಯ ಕಲಾವಿದೆ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಇವರು ತರಬೇತಿ ನಡೆಸಿಕೊಡಲಿರುವರು.
ವಿವರಣಾತ್ಮಕ ನೃತ್ಯ ತರಬೇತಿ, ಶಾರೀರಿಕ ದೃಢತೆ ಹಾಗೂ ಬಳುಕು, ಮನಸ್ಸಿನ ಶಾಂತತೆಗಾಗಿ ವ್ಯಾಯಾಮ ಇತ್ಯಾದಿ ನೃತ್ಯ ತರಬೇತಿ ಶಿಬಿರದ ವಿಶೇಷತೆಗಳಾಗಿವೆ .
8 ವರ್ಷಕ್ಕೆ ಮೇಲ್ಪಟ್ಟ ಮಕ್ಕಳಿಗೂ ಸ್ತ್ರೀಯರಿಗೂ ಈ ಶಿಬಿರದಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

