ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಹೊಸ ವರ್ಷ ಪ್ರಾರಂಭವಾದ 23 ದಿನಗಳಲ್ಲಿ ರಾಜ್ಯದಲ್ಲಿ 608 ಕೊರೊನಾ ಸಾವುಗಳು ದೃಢಪಟ್ಟಿವೆ. ನಿನ್ನೆಯೊಂದೇ ದಿನ 70 ಸಾವುಗಳು ವರದಿಯಾಗಿದ್ದವು
ಹೆಚ್ಚಿನ ಸಾವುಗಳು ಗಂಭೀರ ಕಾಯಿಲೆ, ಮಧುಮೇಹ ಮತ್ತು ಜೀವನಶೈಲಿಯ ಕಾಯಿಲೆಗಳಿಂದ ಉಂಟಾಗಿವೆ. ರೋಗದ ಹರಡುವಿಕೆಯ ಹೆಚ್ಚಳಕ್ಕೆ ಅನುಗುಣವಾಗಿ ಗಂಭೀರ ಸ್ಥಿತಿಯಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದೇ ವೇಳೆ, ಐಸಿಯು ಹಾಸಿಗೆಗಳಲ್ಲಿ ರೋಗಿಗಳ ಸಂಖ್ಯೆಯು ಶೇಕಡಾ 57 ರಷ್ಟು ಹೆಚ್ಚಾಗಿದೆ ಮತ್ತು ವೆಂಟಿಲೇಟರ್ ಸಹಾಯದ ಅಗತ್ಯವಿರುವ ಜನರ ಸಂಖ್ಯೆಯು ಶೇಕಡಾ 23 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಸಚಿವರು ಹೇಳಿರುವರು.
ರಾಜ್ಯದಲ್ಲಿ ನಿನ್ನೆ 45,000 ಕ್ಕೂ ಹೆಚ್ಚು ಜನರಿಗೆ ಕೊರೋನಾ ದೃಢಪಟ್ಟಿತ್ತು. ಪರೀಕ್ಷಾ ಧನಾತ್ಮಕತೆಯ ದರಗಳು ಸಹ ಹೆಚ್ಚುತ್ತಿವೆ. TPR 43 ಶೇ. ಮೀರಿದೆ. ತಿರುವನಂತಪುರಂ ಮತ್ತು ಎರ್ನಾಕುಳಂ ಜಿಲ್ಲೆಗಳಲ್ಲಿ ಅತಿ ಹೆಚ್ಚು ರೋಗಿಗಳಿದ್ದಾರೆ.
ವೈರಸ್ ಹರಡುವಿಕೆಯ ಕಾರಣ ರಾಜ್ಯದಲ್ಲಿ ಇಂದು (ಭಾನುವಾರ) ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗಿದೆ. ಅನಗತ್ಯವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಅಡ್ಡಾಡುವುದು ಕಂಡುಬಂದರೆ ಪ್ರಕರಣ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುಗಿದೆ. ತುರ್ತು ಪ್ರಯಾಣ ಮಾಡಬೇಕಿದ್ದರೆ ದಾಖಲೆಗಳನ್ನು ತೋರಿಸಿ ಸಂಚರಿಸಬಹುದು.




