HEALTH TIPS

ಸೋಂಕು ಪತ್ತೆಯಾದ 90 ದಿನಗಳ ಬಳಿಕವೇ ಕೋವಿಡ್ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು: ಪರಿಣತರ ಸಲಹೆ

          ಬೆಂಗಳೂರು: ದೇಶದಲ್ಲಿ ಬೂಸ್ಟರ್ ಡೋಸ್ ಕೊರೊನಾ ಲಸಿಕೆ ಕುರಿತಾಗಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಹತ್ವದ ಸೂಚನೆಯೊಂದು ಹೊರಬಿದ್ದಿದೆ. ಅದೇನೆಂದರೆ ಕೊರೊನಾ ಎರಡೂ ಡೋಸ್ ಲಸಿಕೆ ಪಡೆದ ನಂತರವೂ ಕೊರೊನಾ ಸೋಂಕಿಗೆ ತುತ್ತಾಗಿದ್ದಲ್ಲಿ, ಅಂಥವರು ಸೋಂಕು ಪತ್ತೆಯಾದ ದಿನದಿಂದ ಕನಿಷ್ಠ 90 ದಿನಗಳಾದ ನಂತರವಷ್ಟೇ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂಬುದು.  

          ಬೂಸ್ಟರ್ ಡೋಸ್ ಪಡೆದು 28 ದಿನಗಳು ಕಳೆದ ನಂತರ ಕೊರೊನಾ ನಿರೋಧಕ ಆಂಟಿ ಬಾಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುವುದು, ಹೀಗಾಗಿ ಬೂಸ್ಟರ್ ಡೋಸ್ ಪಡೆದ ನಂತರವೂ ಕೊರೊನಾ ಸೋಂಕು ತಾಕುವ ಸಾಧ್ಯತೆ ಇರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

         ಈ ಹಿಂದೆ ಕೊರೊನಾ ಸೋಂಕಿಗೆ ತುತ್ತಾದವರು ಕೂಡಾ 90 ದಿನಗಳ ಬಳಿಕವಷ್ಟೇ ಬೂಸ್ಟರ್ ಡೋಸ್ ಪಡೆಯಬೇಕು. ಏಕೆಂದರೆ ಕೊರೊನಾ ಸೋಂಕಿಗೆ ತುತ್ತಾದವರ ದೇಹದಲ್ಲಿ ಕೊರೊನಾ ಸೋಂಕು ನಿರೋಧಕ ಕಣಗಳು ಉತ್ಪತ್ತಿಯಾಗಿರುತ್ತವೆ. ಹೀಗಾಗಿ ಬೂಸ್ಟರ್ ಡೋಸ್ ಅವಶ್ಯಕತೆ ಇರುವುದಿಲ್ಲ. ಅಂಥವರು 90 ದಿನಗಳ ಒಳಗೆ ಬೂಸ್ಟರ್ ಡೋಸ್ ಪಡೆದರೂ ಅದರಿಂದ ಪ್ರಯೋಜನವಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries