ಕಾಸರಗೋಡು: ಅರಣ್ಯ ಇಲಾಖೆ ಅಧೀನದಲ್ಲಿರುವ ಕಾಸರಗೋಡು ರೇಂಜ್‍ನ ಪಳ್ಳಂ ಲೋಗ್‍ಪೋಂಡ್ ಡಿಪೋದಲ್ಲಿನ 29ತೆಂಗಿನ ಮರಗಳಿಂದ ಮೂರುವರ್ಷಗಳ ಕಾಲಾವಧಿಗೆ ತೆಂಗಿನಕಾಯಿ ಸಂಗ್ರಹಕ್ಕಾಗಿ ಜ. 21ರಂದು ಸಂಜೆ 3ಕ್ಕೆ ಕಾಸರಗೋಡು ರೇಂಜ್ ಅರಣ್ಯ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕ ಹರಾಜು ನಡೆಯಲಿದೆ.
ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಕಾಯಂ ವಿಳಾಸವನ್ನು ದೃಢಪಡಿಸುವ ನಿಟ್ಟಿನಲ್ಲಿ ಗ್ರಾಮಾಧಿಕಾರಿಯ ಸರ್ಟಿಫಿಕೇಟ್, ಆಧಾರ್‍ಕಾರ್ಡ್ ಅಥವಾ ಚುನಾವಣಾ ಗುರುತಿನ ಚೀಟಿ ಹಾಜರುಪಡಿಸಬೇಕಾಗಿದೆ. ಜತೆಗೆ ಒಂದು ಸಾವಿರ ರೂ. ಮೂಲಧನ ಠೇವಣಿಯಿರಿಸಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ಡಿವಿಶನಲ್ ಫಾರೆಸ್ಟ್ ಕಚೇರಿ- 04994 256119 ಅಥವಾ ಕಾಸರಗೋಡು ರೇಂಜ್ ಫಾರೆಸ್ಟ್ ಕಚೇರಿ-04994 22507ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



