ಮಧೂರು: ನುಳ್ಳಿಪಾಡಿಯ ಕನ್ನಡ ಭವನ ಗ್ರಂಥಾಲಯದ ಪುಸ್ತಕ ಕ್ರಮೀಕರಣ ಹಾಗೂ ಕಾರ್ಯ ವೈಖರಿಯನ್ನು ಹಾಗು ಕನ್ನಡ ಪರ ಚಟುವಟಿಕೆಗಳನ್ನು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಎಂ.ಎನ್.ನಂದೀಶ್ ಹಂಚೆ ಶ್ಲಾಘಿಸಿದರು.
ಕಥೆಗಾರ್ತಿ ಸ್ನೇಹಲತಾ ದಿವಾಕರ್ ಕುಂಬ್ಳೆ ಅವರ ಕಥಾ ಸಂಕಲನ 'ಆಮೆ' ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ಡಾ.ಎಂ.ಎನ್.ನಂದೀಶ್ ಹಂಚೆ ಕನ್ನಡ ಭವನಕ್ಕೆ ಭೇಟಿ ನೀಡಿ ಗ್ರಂಥಾಲಯ ವೀಕ್ಷಿಸಿ ಮಾತನಾಡಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುವುದಾಗಿ ಈ ವೇಳೆ ಅವರು ಭರವಸೆ ನೀಡಿದರು.
ಪುಸ್ತಕ ಪ್ರಾಧಿಕಾರದ ಸದಸ್ಯ ಟಿ.ಎ.ಎನ್.ಖಂಡಿಗೆ ಜೊತೆಯಲ್ಲಿದ್ದರು. ಈ ಸಂದಭರ್Àದಲ್ಲಿ ಕಾಸರಗೋಡಿನ ಪ್ರಕಾಶಕರು, ಲೇಖಕರು ಪುಸ್ತಕಗಳನ್ನು ಅಚ್ಚು ಹಾಕಿಸಿ ವಿತರಿಸಲು, ಪ್ರಾಧಿಕಾರ ಖರೀದಿಸಿ ಬೆಂಬಲ ನೀಡಲು, ಲೇಖಕರನ್ನು ಆರಿಸಿ ಗೌರವಿಸಿ ಪೆÇ್ರೀತ್ಸಾಹಿಸಲು ಮನವಿ ಮಾಡಿಕೊಳ್ಳಲಾಯಿತು.
ಇದೇ ಸಂದಭರ್Àದಲ್ಲಿ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ಹಾಗು ಸದಸ್ಯ ಟಿ.ಎ.ಎನ್.ಖಂಡಿಗೆ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ, ಪುಸ್ತಕ ಹಾರ ನೀಡಿ ಗ್ರಂಥಾಲಯದ ಸ್ಥಾಪಕ ವಾಮನ್ ರಾವ್ ಬೇಕಲ್, ಕೋಶಾಧಿಕಾರಿ ಸಂಧ್ಯಾರಾಣಿ ಅವರು ಗೌರವಿಸಿದರು.
ಕೈರಳಿ ಪ್ರಕಾಶನ ಸಂಸ್ಥೆ, ಜಾನಪದ ಪರಿಷತ್, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ಪತ್ರಕರ್ತ ಪ್ರದೀಪ್ ಬೇಕಲ್, ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ಗಡಿನಾಡು ಸಾಹಿತ್ಯ, ಸಾಂಸ್ಕøತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್, ದೀಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಭವನ ಕಾರ್ಯದರ್ಶಿ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರ್ವಹಿಸಿದರು.




