ನವದೆಹಲಿ: ವಿವಾಹವಾಗಲು ವಧುವಿನ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಸಂಬಂಧ ಮಸೂದೆ ಕುರಿತ ರಚನೆಯಾಗಿರುವ ಸಂಸತ್ತಿನ ಸ್ಥಾಯಿ ಸಮಿತಿಯು ಸಾರ್ವಜನಿಕರು ಹಾಗೂ ಭಾಗಿದಾರರಿಂದ ಅಭಿಪ್ರಾಯಗಳು, ಸಲಹೆಗಳನ್ನು ಆಹ್ವಾನಿಸಿದೆ.
0
samarasasudhi
ಜನವರಿ 23, 2022
ನವದೆಹಲಿ: ವಿವಾಹವಾಗಲು ವಧುವಿನ ಕನಿಷ್ಠ ವಯಸ್ಸನ್ನು 18ರಿಂದ 21ಕ್ಕೆ ಏರಿಸುವ ಸಂಬಂಧ ಮಸೂದೆ ಕುರಿತ ರಚನೆಯಾಗಿರುವ ಸಂಸತ್ತಿನ ಸ್ಥಾಯಿ ಸಮಿತಿಯು ಸಾರ್ವಜನಿಕರು ಹಾಗೂ ಭಾಗಿದಾರರಿಂದ ಅಭಿಪ್ರಾಯಗಳು, ಸಲಹೆಗಳನ್ನು ಆಹ್ವಾನಿಸಿದೆ.
ಬಾಲ್ಯವಿವಾಹ ನಿಯಂತ್ರಣ (ತಿದ್ದುಪಡಿ) ಮಸೂದೆ 2021 ಕುರಿತಂತೆ ಆಕ್ಷೇಪಣೆ, ಸಲಹೆಯನ್ನು 15ದಿನದಲ್ಲಿ ಲಿಖಿತವಾಗಿ ಅಥವಾ ಮೌಖಿಕವಾಗಿ ಸಲ್ಲಿಸಬಹುದು ಎಂದು ತಿಳಿಸಿದೆ.
ಉದ್ದೇಶಿತ ಮಸೂದೆಯನ್ನು ಲೋಕಸಭೆಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್‌ನಲ್ಲಿ ಮಂಡಿಸಲಾಗಿತ್ತು. ಸಮಾಜದ ಕೆಲವರ್ಗದಿಂದ ಟೀಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಸೂದೆಯನ್ನು ಬಿಜೆಪಿ ಸಂಸದ ವಿನಯ್ ಸಹಸ್ರಬುದ್ಧೆ ನೇತೃತ್ವದ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು.