HEALTH TIPS

ವಿಧಾನಸಭೆಯಲ್ಲಿ ಗದ್ದಲ, ಕೂಗಾಟಕ್ಕೆ ಅವಕಾಶವಿಲ್ಲ: ಪ್ರಜಾಪ್ರಭುತ್ವದ ಮೂಲಕ ಬರುವವರು ಪ್ರಜಾಪ್ರಭುತ್ವ ವಿರೋಧಿಗಳಾಗಬಾರದು: ಸುಪ್ರೀಂ ಕೋರ್ಟ್

  

                ನವದೆಹಲಿ:  ವಿಧಾನಮಂಡಲ ಗದ್ದಲ ಪ್ರಕರಣದಲ್ಲಿ  ಸುಪ್ರೀಂ ಕೋರ್ಟ್ ತಿರುಗೇಟು ನೀಡಿದೆ. ಪ್ರಜಾಪ್ರಭುತ್ವದ ಮೂಲಕ ಬಂದವರು ಪ್ರಜಾಪ್ರಭುತ್ವ ವಿರೋಧಿಯಾಗಿ ವರ್ತಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಟೀಕಿಸಿದೆ.

              ವಿಧಾನ ಸಭೆಯಲ್ಲಿ ಕೇವಲ ಗದ್ದಲಗಳು ಮಾತ್ರವಿರುತ್ತದೆ ಎಂಬ ಸಾಮಾನ್ಯ ಗ್ರಹಿಕೆ ಇರುವುದು ವಿಷಾದನೀಯ. ಚರ್ಚೆಯ ವೇಳೆ ಗದ್ದಲ ಅಥವಾ ಕೂಗಾಟಕ್ಕೆ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪವಿತ್ರ ಸಂವಿಧಾನ ರಕ್ಷಕ ದೇಗುಲಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸದಸ್ಯರನ್ನು ದೀರ್ಘಕಾಲ ಅಮಾನತುಗೊಳಿಸುವುದು  ಅನ್ಯಾಯ. ಮಹಾರಾಷ್ಟ್ರ ಶಾಸಕರ ಅಮಾನತು ರದ್ದುಗೊಳಿಸುವ ನಿರ್ಧಾರ ಈ ನಿಟ್ಟಿನಲ್ಲಿ  ಉಲ್ಲೇಖನೀಯವೆಂದು ಅದು ತಿಳಿಸಿದೆ. 

                   ಮಹಾರಾಷ್ಟ್ರ ವಿಧಾನಸಭೆಯಲ್ಲಿ 12 ಬಿಜೆಪಿ ಶಾಸಕರ ಅಮಾನತು ಕ್ರಮವನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿತ್ತು. ಜುಲೈ 5, 2021 ರಿಂದ ಅವರನ್ನು ಒಂದು ವರ್ಷದವರೆಗೆ ಅಮಾನತುಗೊಳಿಸುವ ನಿರ್ಧಾರವನ್ನು ನ್ಯಾಯಾಲಯವು ರದ್ದುಗೊಳಿಸಿತು.

                    ಶಾಸಕರ ವಿರುದ್ಧ ಕೈಗೊಂಡಿರುವ ಕ್ರಮ ಕಾನೂನುಬಾಹಿರ ಮತ್ತು ಅಸಂವಿಧಾನಿಕ ಮತ್ತು ತರ್ಕಬದ್ಧವಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries