ಕುಂಬಳೆ: ಕಳೆದ ತ್ರಿಸ್ಥರ ಪಂಚಾಯಿತಿ ಚುನಾವಣೆಯಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಕುಂಬಳೆ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ-ಸಿಪಿಎಂ ಹೊಂದಾಣಿಕೆ ಮಾಡಿ ಸ್ಪರ್ಧಿಸಿವೆ ಎಂಬ ಯುಡಿಎಫ್ ಆರೋಪಕ್ಕೆ ಪುಷ್ಟಿ ನೀಡುವ ಘಟನೆಗಳು ನಡೆಯುತ್ತಿವೆ ಎಂದು ಯೂತ್ ಲೀಗ್ ಮುಖಂಡರು ಕುಂಬಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೊಯಿಪಾಡಿ ವಿನು ಕೊಲೆ ಪ್ರಕರಣದ ಆರೋಪಿಗಳ ಶಿಕ್ಷೆ ಖಾಯಂಗೊಳಿಸಿದ ಗೌರವಾನ್ವಿತ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಸಭೆ ಬಹಿಷ್ಕರಿಸಲು ಬಿಜೆಪಿ ನಿರ್ಧರಿಸಿರುವುದು ಹುತಾತ್ಮ ಯೋಧನ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಲು ಉಭಯ ಪಕ್ಷಗಳ ನಡುವಣ ನಾಟಕದ ಮುಂದುವರಿದ ಭಾಗವಾಗಿದೆ. ಡಿವೈಎಫ್ ಐ ಯಿಂದ ಪ್ರಭಾವಿತಗೊಂಡ ಬಿಜೆಪಿ-ಸಿಪಿಎಂ ಸಂಬಂಧದ ಸೂಚನೆ ಇದಾಗಿದೆ. ಯುಡಿಎಫ್ ಬಹಿರಂಗಪಡಿಸಿದ ಹೇಳಿಕೆಗಳನ್ನು ಖಂಡಿಸಿ ಸಿಪಿಎಂ ನಾಯಕರ ಪ್ರಚಾರ ಮತ್ತು ವಿವರಣಾತ್ಮಕ ಸಭೆಗಳು ಸಾರ್ವಜನಿಕರನ್ನು ದಾರಿ ತಪ್ಪಿಸುವ ನೆಪ ಎಂಬುದು ಸ್ಪಷ್ಟವಾಗಿದೆ.ತಾನು ಬಿಜೆಪಿಯಿಂದ ಆಯ್ಕೆಯಾದವನು ಎಂದು ಸ್ಥಾಯೀ ಸಮಿತಿ ಅಧ್ಯಕ್ಷ ಕೊಗ್ಗು ಬಹಿರಂಗ ಪಡಿಸಿದ ನಂತರ ಸಿಪಿಎಂ ನಾಯಕರ ನಿಲುವೇನು ಮತ್ತು ಅವರು ಏಕೆ ರಾಜೀನಾಮೆ ನೀಡಬೇಕು ಎಂದು ತಿಳಿಯಬೇಕಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಮತ್ತು ಬಿಜೆಪಿ ಈ ಮೈತ್ರಿಯ ಭಾಗವಾಗಿ ನಡೆಸಿದ ಬೇಹುಗಾರಿಕೆಯ ಬಗ್ಗೆ ನಾಯಕರು ಸ್ಪಷ್ಟನೆ ನೀಡಬೇಕು' ಎಂದು ಯೂತ್ ಲೀಗ್ ಆರೋಪಿಸಿದೆ.
ಸೆಷನ್ಸ್ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಕೊಲೆ ಪ್ರಕರಣದಲ್ಲಿ ಕೊಗ್ಗು ಸಹಿತ ಸಿಪಿಎಂ ಪಕ್ಷದ ಕಾರ್ಯಕರ್ತರನ್ನು ತಪ್ಪಿತಸ್ಥನೆಂದು ಪರಿಗಣಿಸಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಕೇವಲ ಎರಡೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಬಿಜೆಪಿ ಮುಖಂಡರು ಪಕ್ಷಾತೀತವಾಗಿ ತಮ್ಮ ಪಕ್ಷದ ಕಾರ್ಯಕರ್ತ, ಹುತಾತ್ಮ ಯೋಧನ ಹಾಗೂ ಕುಟುಂಬಸ್ಥರಿಗೆ ದ್ರೋಹ ಬಗೆದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರು ರಾಜೀನಾಮೆ ನೀಡಲಿ ಇಲ್ಲವಾದಲ್ಲಿ ಉಚ್ಛಾಟನೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮುಸ್ಲಿಂಲೀಗ್ ಜಿಲ್ಲಾಧ್ಯಕ್ಷ ಅಝೀಝ್ ಕಳತ್ತೂರು, ಪಂಚಾಯಿತಿ ಸದಸ್ಯ ಯೂಸುಫ್ ಉಳುವಾರ್, ಪಂಚಾಯಿತಿ ಅಧ್ಯಕ್ಷ ಕೆ.ಎಂ.ಅಬ್ಬಾಸ್ ಉಪಸ್ಥಿತರಿದ್ದರು.

