ಕುಂಬಳೆ: ಅಧಿಕಾರದ ಮುಂದುವರಿಕೆಗಾಗಿ ಸಿಪಿಎಂ ಆಡುತ್ತಿರುವ ಕೋಮುವಾದವು ಕೇರಳದಲ್ಲಿ ಎಡಪಕ್ಷಗಳನ್ನು ನಾಶ ಮಾಡಲಿದೆ ಎಂದು ಜಮಾತೆ ಇಸ್ಲಾಮಿ ಕೇರಳ ವಿಭಾಗ ಮುಖ್ಯಸ್ಥ ಅಮೀರ್ ಪಿ ಮುಜೀಬ್ ರಹಮಾನ್ ಹೇಳಿದರು.
ಜಮಾಅತೆ ಇಸ್ಲಾಮಿ ಕುಂಬಳೆ ವಲಯ ಸಮಿತಿ ಕುಂಬಳೆಯಲ್ಲಿ ಆಯೋಜಿಸಿದ್ದ ನಾಸ್ತಿಕತೆ, ಉದಾರವಾದ ಮತ್ತು ಕಮ್ಯುನಿಸಂ ಎಂಬ ವಿಷಯದ ಕುರಿತಾದ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಲಯ ಅ|ಧ್ಯಕ್ಷ ಪಿ.ಎಸ್.ಅಬ್ದುಲ್ಲ ಕುಂಞÂ ಅಧ್ಯಕ್ಷತೆ ವಹಿಸಿದ್ದರು. ಜಮಾತೆ ಇಸ್ಲಾಮಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಪಿ.ರುಕ್ಸಾನಾ, ಜಮಾತೆ ಇಸ್ಲಾಮಿ ಕಾಸರಗೋಡು ಜಿಲ್ಲಾಧ್ಯಕ್ಷ ವಿ.ಎನ್.ಹಾರಿಸ್, ಕೋಝಿಕ್ಕೋಡ್ ಜಿಲ್ಲಾ ಸಮಿತಿ ಸದಸ್ಯ ಶಿಹಾಬುದ್ದೀನ್ ಇಬ್ನ್ ಹಮ್ಜಾ ಮತ್ತಿತರರು ಮಾತನಾಡಿದರು.
ಮಹಿಳಾ ಜಿಲ್ಲಾಧ್ಯಕ್ಷೆ ವಿ.ಕೆ.ಜಾಸ್ಮಿನ್, ಸಾಲಿಡಾರಿಟಿ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಪಳ್ಳಿಕ್ಕೆರೆ, ಎಸ್‍ಐಒ ಜಿಲ್ಲಾಧ್ಯಕ್ಷ ನಫೀಹ್, ಜಿಐಒ ಜಿಲ್ಲಾಧ್ಯಕ್ಷೆ ಸುಮೈಲಾ, ಜಮಾಅತೆ ಇಸ್ಲಾಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಶೀರ್ ಶಿವಪುರಂ, ಕಾಞಂಗಾಡು ಏರಿಯಾ ಅಧ್ಯಕ್ಷ ಕೆ.ಎಂ.ಶಾಫಿ, ಕಾಞಂಗಾಡು ಏರಿಯಾ ಅಧ್ಯಕ್ಷ ಕೆ.ಪಿ.ನಾದೀರಾ ಮತ್ತಿತರರಿದ್ದರು. ಇರ್ಷಾದ್ ಪ್ರಾರ್ಥ|ನೆ ಹಾಡಿದರು. ಸಮ್ಮೇಳನದ ಸಂಚಾಲಕ ಅಶ್ರಫ್ ಬಾಯಾರ್ ಸ್ವಾಗತಿಸಿ, ವಲಯ ಕಾರ್ಯದರ್ಶಿ ಬಿ.ಎಂ ಅಬ್ದುಲ್ಲ ವಂದಿಸಿದರು.

