ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ಅಲೆಗೆ ಓಮಿಕ್ರಾನ್ ರೂಪಾಂತರ ತಳಿ ಕಾರಣವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ SARS-CoV2 ನ ಓಮಿಕ್ರಾನ್ ರೂಪಾಂತರ ಪತ್ತೆ ಮಾಡಲು ಜೀನೋಮ್ ಸೀಕ್ವೆನ್ಸಿಂಗ್ ಕಾರ್ಯ ವಿಧಾನವನ್ನು ಬಳಸಿಕೊಳ್ಳಲಾಗುತ್ತಿದೆ. ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಓಮಿಕ್ರಾನ್ ರೂಪಾಂತರ ಪತ್ತೆಯಲ್ಲಿ ಆಗುವ ವಿಳಂಬವನ್ನು ಕಡಿತಗೊಳಿಸಲು ಓಮಿಶೋರ್ ಟೆಸ್ಟಿಂಗ್ ಕಿಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯಲ್ಲಿನ ನ್ಯೂರೋವೈರಾಲಜಿ ವಿಭಾಗದ ಮಾಜಿ ಮುಖ್ಯಸ್ಥ ಮತ್ತು ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಸಂಶೋಧನೆ ಮತ್ತು ಅಭಿವೃದ್ಧಿಯ ಮುಖ್ಯಸ್ಥ ಡಾ ವಿ ರವಿ ಅವರ ತಂಡವು ವಿಶ್ವದ ಮೊದಲ ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.
ಜೀನೋಮ್ ಸೀಕ್ವೆನ್ಸಿಂಗ್ ಮೂಲಕ ಓಮಿಕ್ರಾನ್ ರೂಪಾಂತರ ತಳಿಯನ್ನು ಪತ್ತೆ ಮಾಡಲಾಗುತ್ತದೆ. S-ಜೀನ್ ಗುರಿ ವೈಫಲ್ಯ (SGTF) ಮತ್ತು S-ಜೀನ್ ರೂಪಾಂತರದ ಬೆಳವಣಿಗೆ (SGMA) ಅನ್ನು ಸಂಯೋಜಿಸುವ ಮೂಲಕ ಓಮಿಕ್ರಾನ್ ರೂಪಾಂತರವನ್ನು ಕಂಡು ಹಿಡಿಯಬಹುದಾಗಿದೆ.
ಡಿಸೆಂಬರ್ 30ರಂದು ಓಮಿಶೋರ್ ಕಿಟ್ ಅನುಮೋದನೆ ಕಳೆದ ಡಿಸೆಂಬರ್ 30ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು "ಓಮಿಶೋರ್" ಟೆಸ್ಟಿಂಗ್ ಕಿಟ್ ಬಳಕೆಗೆ ಅನುಮೋದನೆ ನೀಡಿದೆ. ಈ ಟೆಸ್ಟಿಂಗ್ ಕಿಟ್ ಗಳ ವಾಣಿಜ್ಯ ಉತ್ಪಾದನೆಗಾಗಿ ಬುಧವಾರ ಟಾಟಾ ಮ್ಯಾನೇಜಿಂಗ್ ಡೈರೆಕ್ಟರ್ ಅವರು, ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್‌ನಿಂದ ಪರವಾನಗಿ ಪಡೆದುಕೊಂಡಿದ್ದಾರೆ," ಎಂದು ಡಾ ರವಿ ಘೋಷಿಸಿದ್ದಾರೆ.ಓಮಿಶೋರ್ ಕಿಟ್ ನಲ್ಲಿ ಶೇ.100ರಷ್ಟು ನಿಖರತೆ ಜಾಗತಿಕವಾಗಿ ಓಮಿಕ್ರಾನ್ ಗಾಗಿ ಎಲ್ಲಾ ಇತರ ಪರೀಕ್ಷಾ ಕಿಟ್‌ಗಳನ್ನು ಜೀನ್ ಪತ್ತೆ ಅಥವಾ ರೂಪಾಂತರಗಳ ನಿರ್ದಿಷ್ಟ ಪತ್ತೆಗಾಗಿ ತಯಾರಿಸಲಾಗುತ್ತದೆ. ಆದರೆ ಓಮಿಶೋರ್ ಎರಡನ್ನೂ ಸಂಯೋಜಿಸುವ ಮೊದಲ ಪರೀಕ್ಷಾ ಕಿಟ್ ಆಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯು (ICMR) ಮೌಲ್ಯಮಾಪನದಲ್ಲಿ ಇದು ಶೇ.100 ಪ್ರತಿಶತ ನಿಖರತೆಯನ್ನು ಹೊಂದಿರುತ್ತದೆ ಎಂದು ಹೇಳಿದೆ. ನಾವು ಈಗ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್‌ಸಿಒ) ನಿಂದ ಪರವಾನಗಿ ಪಡೆದಿದ್ದೇವೆ. ಒಂದು ವಾರದೊಳಗೆ ವಾಣಿಜ್ಯ ಬಳಕೆಗಾಗಿ ಓಮಿಶೋರ್ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ. ಒಂದು ಟೆಸ್ಟಿಂಗ್ ಕಿಟ್ ಬೆಲೆಯನ್ನು ಗರಿಷ್ಠ 250 ರೂಪಾಯಿ ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಡಾ ವಿ ರವಿ ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರಿ ಪತ್ತೆಯಲ್ಲಿ ವಿಳಂಬ ಆಗುವುದಿಲ್ಲ ಓಮಿಶೋರ್ ಒಂದು ಸಾಮಾನ್ಯ PCR ಪರೀಕ್ಷೆಯಾಗಿದೆ. ಇದು ಎಲ್ಲಾ ಪ್ರಮಾಣಿತ ನೈಜ-ಸಮಯದ PCR ಯಂತ್ರಗಳೊಂದಿಗೆ ಹೊಂದಿಕೊಳ್ಳುತ್ತದೆ. ಓಮಿಕ್ರಾನ್ ರೋಗ ಪತ್ತೆಯಾಗಿ ನಡೆಸುವ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ವರದಿಯನ್ನು ಕಾಯುವ ಪದ್ಧತಿ ಚಾಲ್ತಿಯಲ್ಲಿದೆ. ಆದರೆ, ಓಮಿಶೋರ್ ಟೆಸ್ಟಿಂಗ್ ಕಿಟ್ ಈ ಜೀನೋಮ್ ಸೀಕ್ವೆನ್ಸಿಂಗ್ ವರದಿಗಾಗಿ ಕಾಯುವ ಸಮಯವನ್ನು ಕಡಿತಗೊಳಿಸುತ್ತದೆ. ಅಲ್ಲದೇ ಎರಡೂವರೆ ಗಂಟೆಯಲ್ಲಿ ಕೊರೊನಾವೈರಸ್ ಸೋಂಕಿತನ ಮಾದರಿ ಸಂಗ್ರಹಣೆ ಮತ್ತು ಆರ್ಎನ್ಎಯನ್ನು ಪತ್ತೆ ಮಾಡಿ ಅಂತಿಮ ಮತ್ತು ನಿಖರ ವರದಿಯನ್ನು ನೀಡುತ್ತದೆ.
2 ರಿಂದ 5 ಲಕ್ಷ ಓಮಿಶೋರ್ ಕಿಟ್ ಉತ್ಪಾದಿಸುವ ಗುರಿ "ತಮಿಳುನಾಡಿನ ಶ್ರೀಪೆರಂಬದೂರ್ ಟಾಟಾ ಎಂಪಿ ಘಟಕವು ಪ್ರಸ್ತುತ ದಿನಕ್ಕೆ 2 ಲಕ್ಷ ಓಮಿಶೋರ್ ಟೆಸ್ಟಿಂಗ್ ಕಿಟ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಬೇಡಿಕೆಯ ಹಿನ್ನೆಲೆ ತಿಂಗಳಾಂತ್ಯದ ವೇಳೆಗೆ ಈ ಸಂಖ್ಯೆಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಇದರ ಜೊತೆಗೆ ನಾವು ಓಮಿಶೋರ್ ಕಿಟ್ ಅನ್ನು ರಫ್ತು ಮಾಡುವುದಕ್ಕೆ ಯೋಜನೆ ಹಾಕಿಕೊಂಡಿದ್ದೇವೆ," ಎಂದು ಡಾ. ವಿ ರವಿ ಹೇಳಿದ್ದಾರೆ.

