ಕಾಸರಗೋಡು: ಇಡುಕ್ಕಿಯಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ, ಕಣ್ಣೂರು ತಲಿಪರಂಬ ನಿವಾಸಿ ಧೀರಜ್(21)ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿದ್ದಂತೆ ಕಣ್ಣೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಕಚೇರಿಗಳಿಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಅವರ ವಾಹನಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಕಾಞಂಗಾಡಿನ ವಿವಿಧೆಡೆ ಕಾಂಗ್ರೆಸ್ ಕಚೇರಿಗಳಿಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೈದಿದ್ದಾರೆ. ಎಸ್‍ಎಫ್‍ಐ ಕಾರ್ಯಕರ್ತನಾಗಿದ್ದ ಧೀರಜ್‍ನನ್ನು ಕಾಲೇಜು ಕ್ಯಾಂಪಸ್ ಬಳಿ ಇರಿದು ಕೊಲೆಗೈಯಲಾಗಿತ್ತು.
ಕಾಸರಗೋಡು ಜಿಲ್ಲೆಯಲ್ಲೂ ಪೊಲೀಸ್ ತಪಾಸಣೆ ಚುರುಕುಗೊಳಿಸಲಾಗಿದೆ. ಎಸ್‍ಎಫ್‍ಐ ಕಾರ್ಯಕರ್ತ ಧೀರಜ್ ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯ ವಿವಿಧ ಶಿಕ್ಷಣ ಕೇಂದ್ರ ವಠಾರದಲ್ಲಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಾವಲು ಬಿಗುಗೊಳಿಸಲಾಗಿದೆ.

