ತಿರುವನಂತಪುರ: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್‍ನ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಗರ್ಭಿಣಿಯರಿಗೆ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂಬಂಧ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಸರ್ಕಾರ ಆದೇಶ ಹೊರಡಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರೋಹಿಣಿ ಅವರು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯನ್ನು ಪರಿಗಣಿಸುವಂತೆ ಸರ್ಕಾರದಿಂದ ಮನವಿ ಕೇಳಿದ್ದರು. ಕೆಲವು ಷರತ್ತುಗಳ ಮೇಲೆ ಗರ್ಭಿಣಿಯರಿಗೆ ಮನೆಯಿಂದ ಕೆಲಸದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸರ್ಕಾರ ಇದಕ್ಕುತ್ತರಿಸಿ ಆದೇಶ ನೀಡಿದೆ.
ಇ-ಕಚೇರಿಯಲ್ಲಿ ಲಭ್ಯವಿರುವ ಫೈಲ್‍ಗಳು ಮತ್ತು ಮೇಲ್‍ಗಳನ್ನು ಸಮಯೋಚಿತವಾಗಿ ಸಕ್ರಿಯೆಗೊಳಿಸಲು ಇವರಿಗೆ ಸೂಚಿಸಲಾಗಿದೆ. ಕಚೇರಿ ವೇಳೆಯಲ್ಲಿ ಅಧಿಕೃತ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ದೂರವಾಣಿ ವಿಚಾರಣೆಗೆ ಹಾಜರಾಗಬೇಕು. ತುರ್ತು ಸಂದರ್ಭದಲ್ಲಿ ಮೇಲಧಿಕಾರಿಗಳು ಅಗತ್ಯವಿದ್ದಲ್ಲಿ ಕಚೇರಿಗೆ ಖುದ್ದು ಹಾಜರಾಗುವಂತೆ ಷರತ್ತುಗಳು ವಿಧಿಸಬಹುದಾಗಿದೆ ಎಂದು ಸೂಚಿಸಲಾಗಿದೆ.




